Dailyhunt Logo
  • Light mode
    Follow system
    Dark mode
    • Play Story
    • App Story
ಪ್ರತ್ಯೇಕ ಪ್ರಕರಣ: ಕಾರು- ಬೈಕ್ ಅಪಘಾತ; ಸೇತುವೆಗೆ ಕಾರು ಡಿಕ್ಕಿ

ಪ್ರತ್ಯೇಕ ಪ್ರಕರಣ: ಕಾರು- ಬೈಕ್ ಅಪಘಾತ; ಸೇತುವೆಗೆ ಕಾರು ಡಿಕ್ಕಿ

ಕಾರು- ಬೈಕ್ ಅಪಘಾತ : ಬೈಕ್ ಸವಾರನಿಗೆ ಗಾಯಬೆಳ್ತಂಗಡಿ: ಧರ್ಮಸ್ಥಳದ ನೇತ್ರಾವತಿ ಸೇತುವೆ ಬಳಿ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ವರದಿಯಾಗಿದೆ.

ಧರ್ಮಸ್ಥಳ ನಿವಾಸಿ ಪ್ರಭಾಕರ ಪೂಜಾರಿ (53) ಬೈಕ್ ನಲ್ಲಿ ಧರ್ಮಸ್ಥಳದಿಂದ ಉಜಿರೆ ಕಡೆಗೆ ತೆರಳುತ್ತಿದ್ದರು.

ಈ ವೇಳೆ ನೇತ್ರಾವತಿ ಸೇತುವೆ ಬಳಿ ಎದುರಿನಿಂದ ಬಂದ ಕಾರು, ಬೈಕ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಪಿಕಲ್ಲು: ಸೇತುವೆಗೆ ಕಾರು ಡಿಕ್ಕಿ
ಬೆಳ್ತಂಗಡಿ :
ಕೊಕ್ಕಡ ಪಂಚಾಯತ್ ವ್ಯಾಪ್ತಿಯ ಪಾರ್ಪಿಕಲ್ ಸೇತುವೆಗೆ ಧರ್ಮಸ್ಥಳಕ್ಕೆ ಬರುತ್ತಿದ್ದ ಬೆಂಗಳೂರಿನ ಯಾತ್ರಿಕರ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗಕ್ಕೆ ಹಾನಿಯಾಗಿದೆ.

ಈ ವೇಳೆ ಇದೇ ರಸ್ತೆಯಲ್ಲಿ ಬರುತ್ತದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ವಿಪತ್ತು ನಿರ್ವಹಣ ಶೌರ್ಯ ತಂಡದ ಶಿಶಿಲ ಅರಸಿನಮಕ್ಕಿ ಘಟಕದ ಸದಸ್ಯ ರಮೇಶ ಬೈರಕಟ್ಟ ಅವರು, ಗಾಯಗೊಂಡ ಯಾತ್ರಿಕರನ್ನು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸುವ ವ್ಯವಸ್ಥೆ ಮಾಡಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani