Dailyhunt Logo
  • Light mode
    Follow system
    Dark mode
    • Play Story
    • App Story
ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

ಪ್ರವಾಹದಲ್ಲಿ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿಯ ಹುಚ್ಚು ಸಾಹಸ

ವಿಜಯಪುರ: ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿರುವ ಡೋಣಿ ನದಿ ತಾಳಿಕೋಟೆ ತಾಲೂಕಿನ ಸೇತುವೆ ಮುಳಿಗಿದ್ದು, ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿವೆ.

ಮತ್ತೊಂದೆಡೆ ತುಂಬಿ ಹರಿಯುತ್ತಿರುವ ಡೋಣಿ ಕೆಳ ಹಂತದ ಸೇತುವೆ ದಾಟಲು ವ್ಯಕ್ತಿಯೊಬ್ನ ಹುಚ್ಚು ಸಾಹಸಕ್ಕೆ ಮುಂದಾದ ಘಟನೆಯೂ ವರದಿಯಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ: ಜಮೀನಿಗೆ ನುಗ್ಗಿದ ನೀರು, ಬೆಳೆ ಹಾನಿ

ಜಲಾವೃತವಾದ ಸೇತುವೆ ಮೇಲೆ ಅಪಾಯವನ್ನೂ ಲೆಕ್ಕಿಸದೇ ತುಂಬಿ ಹರಿಯುತ್ತಿರುವ ಸೇತುವೆ ಜನರು ಓಡಾಟ ಆರಂಭಿಸಿದ್ದಾರೆ.

ಪ್ರವಾಹದ ಪರಿಣಾಮ ತಾಲೂಕ ಆಡಳಿತ ನದಿ ತೀರದ ಸೇತುವೆ ಬಳಿ ಎಚ್ಚರಿಕೆ ಫಲಕ ಅಳವಡಿದ್ದರೂ ಸೇತುವೆ ಮುಳುಗಡೆಯಿಂದ ಸಂಪರ್ಕವಾಗಿರುವ ಹಡಗಿನಾಳ, ಶಿವಪುರ, ಮೂಕಿಹಾಳ, ನಾಗೂರು, ಹರನಾಳ, ಕಲ್ಲದೇನಹಳ್ಳಿ, ಹಗರಗೊಂಡ ಗ್ರಾಮಗಳ ಕೆಲವರು ತಾಳಿಕೋಟೆ ಪಟ್ಟಣಕ್ಕೆ ಪ್ರವಾಹ ಲೆಕ್ಕಿಸದೇ ನಡೆದುಕೊಂಡು ಬರುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani