Dailyhunt Logo
  • Light mode
    Follow system
    Dark mode
    • Play Story
    • App Story
ಪ್ರಯಾಗ್‌ರಾಜ್‌-ಯಶವಂತಪುರ ನಡುವೆ ವಾರದ ವಿಶೇಷ ರೈಲು

ಪ್ರಯಾಗ್‌ರಾಜ್‌-ಯಶವಂತಪುರ ನಡುವೆ ವಾರದ ವಿಶೇಷ ರೈಲು

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಸಬ್ದರ್‌ ಗಂಜ್‌ ಜಂಕ್ಷನ್‌ ಮತ್ತು ಬೆಂಗಳೂರಿನ ಯಶವಂತಪುರ ಜಂಕ್ಷನ್‌ ನಡುವೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿಭಾಯಿಸಲು ವಾರದ ವಿಶೇಷ ರೈಲು ಸೇವೆ ಆರಂಭಿಸಲಾಗುತ್ತಿದೆ.

ರೈಲು ಸಂಖ್ಯೆ 04135 ಸಬ್ದರ್‌ಗಂಜ್‌ -ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌ ಸ್ಪೆಷಲ್‌ ಪ್ರತಿ ಶುಕ್ರವಾರ ಸಂಚರಿಸಲಿದ್ದು, ಸೆ.

11ರಿಂದ ಡಿಸೆಂಬರ್‌ 4ರವರೆಗೆ ಸೇವೆ ನೀಡಲಿದೆ. ಪ್ರತಿಯಾಗಿ 04136 ಯಶವಂತಪುರ-ಸಬ್ದರ್‌ ಗಂಜ್‌ ವಿಶೇಷ ರೈಲು ಪ್ರತಿ ಸೋಮವಾರ ಸಂಚರಿಸಲಿದ್ದು, ಸೆ.14ರಿಂದ ಡಿ.7ರವರೆಗೆ ಸೇವೆ ಇರಲಿದೆ. ಎರಡೂ ದಿಕ್ಕಿನಲ್ಲಿ ತಲಾ 13 ಟ್ರಿಪ್‌ಗಳು ಇರಲಿವೆ.

ಯಶವಂತಪುರ, ಯಲಹಂಕ, ಹಿಂದೂಪುರ, ರಾಯಚೂರು, ಕೃಷ್ಣಾ ಹಾಗೂ ಯಾದಗಿರಿ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಹೊಂದಿರಲಿದೆ. 19 ಬೋಗಿಗಳ ರೈಲಿನಲ್ಲಿ 2 ಎಸಿ ತ್ರಿ-ಟೈರ್‌, 9 ಸ್ಲೀಪರ್‌, 6 ಸಾಮಾನ್ಯ ಹಾಗೂ 2 ಸೀಟಿಂಗ್‌-ಕಮ್‌-ಲಗೇಜ್‌ ಕೋಚ್‌ ಗಳು ಇರಲಿವೆ. ಸಬ್ದರ್‌ಗಂಜ್‌ನಿಂದ ಶುಕ್ರವಾರ ರಾತ್ರಿ 9.20ಕ್ಕೆ ಹೊರಡುವ ರೈಲು ಭಾನುವಾರ ರಾತ್ರಿ 9.30ಕ್ಕೆ ಯಶ ವಂತಪುರ ತಲುಪಲಿದೆ. ಯಶವಂತಪುರದಿಂದ ಸೋಮ ವಾರ ಬೆಳಗ್ಗೆ 7ಕ್ಕೆ ಹೊರಟು ಬುಧವಾರ ಮುಂಜಾನೆ 4.30ಕ್ಕೆ ಸಬ್ದರ್‌ಗಂಜ್‌ ತಲುಪಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani