Dailyhunt Logo
  • Light mode
    Follow system
    Dark mode
    • Play Story
    • App Story
Pune Case: ಕೊಲೆ ಮಾಡಿದ್ದರೂ ಪಶ್ಚಾತಾಪವಿಲ್ಲ! ಮಾಧ್ಯಮಗಳತ್ತ ಅಶ್ಲೀಲ ಸನ್ನೆ ಮಾಡಿದ ಸಿಯಾ!

Pune Case: ಕೊಲೆ ಮಾಡಿದ್ದರೂ ಪಶ್ಚಾತಾಪವಿಲ್ಲ! ಮಾಧ್ಯಮಗಳತ್ತ ಅಶ್ಲೀಲ ಸನ್ನೆ ಮಾಡಿದ ಸಿಯಾ!

ಹೊಸದಿಲ್ಲಿ: ಮದುವೆ ನಿಶ್ಚಯವಾಗಿದ್ದ ಕೇತನ್‌ ಅಗರ್ವಾಲ್‌ ರನ್ನು ಪ್ರಿಯಕರನೊಂದಿಗೆ ಸೇರಿ ಕೋಟೆಯಿಂದ ದೂಡಿ ಹತ್ಯೆ ಮಾಡಿದ್ದ ಸಿಯಾ ಗೋಯಲ್‌ ಇದೀಗ ಮಾಧ್ಯಮಗಳೆದುರು ದುರ್ವರ್ತನೆ ತೋರಿದ್ದಾರೆ. ಪೊಲೀಸರ ವಶದಲ್ಲಿರುವ ಸಿಯಾ ಗೋಯಲ್‌ ತನ್ನ ಮನೆಯ ಹೊರಗೆ ನಿಂತಿದ್ದ ಮಾಧ್ಯಮದವರ ಕಡೆಗೆ ಅಶ್ಲೀಲ ಸನ್ನೆ ಮಾಡಿದ್ದಾಳೆ.

ಸುದ್ದಿ ಸಂಸ್ಥೆ ಐಎಎನ್‌ಎಸ್ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ 17 ಸೆಕೆಂಡುಗಳ ವೀಡಿಯೊದಲ್ಲಿ ಸಿಯಾ ಪುಣೆಯಲ್ಲಿರುವ ತನ್ನ ಮಾರ್ಕೆಟ್ ಯಾರ್ಡ್ ನಿವಾಸದಿಂದ ಹೊರಗೆ ಹೋಗುತ್ತಿರುವುದನ್ನು ತೋರಿಸಿದೆ. ಅಲ್ಲಿ ಪೊಲೀಸರು ಅವಳನ್ನು ತನಿಖೆಗಾಗಿ ಕರೆದೊಯ್ದಿದ್ದರು. ಕಪ್ಪು ಟಿ-ಶರ್ಟ್ ಧರಿಸಿ, ಮುಖವನ್ನು ಮುಚ್ಚಿಕೊಂಡಿದ್ದ ಸಿಯಾ, ತನ್ನ ದೃಶ್ಯಗಳನ್ನು ಪಡೆಯಲು ಪ್ರಯತ್ನಿಸುತ್ತಿರುವ ಮಾಧ್ಯಮದವರನ್ನು ನೋಡಿ ಮಧ್ಯದ ಬೆರಳನ್ನು ತೋರಿಸಿದಳು.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಎಕ್ಸ್‌ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕೆಗೆ ಘಟನೆಯ ಬಗ್ಗೆ ಪಶ್ಚತಾಪವೇ ಇಲ್ಲ ಎಂದು ಜರಿದಿದ್ದಾರೆ.

ಜೂನ್ 18 ರಂದು ಮಹಾರಾಷ್ಟ್ರದ ಪುಣೆ ಬಳಿಯ ಲೋಹಗಡ್ ಕೋಟೆಯಲ್ಲಿ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ, ಕೇತನ್ ನನ್ನು ಕಣಿವೆಗೆ ತಳ್ಳಿ ಹತ್ಯೆ ಮಾಡಿದ್ದರು. ಸಿಯಾ ಆರಂಭದಲ್ಲಿ ಪೊಲೀಸರಿಗೆ ಕೇತನ್ ಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ಹೇಳಿದ್ದಳು, ಆದರೆ, ಸಿಯಾ ತನ್ನ ನಡವಳಿಕೆಯಲ್ಲಿ ಯಾವುದೇ ದುಃಖವನ್ನು ತೋರಿಸದ ಕಾರಣ ಪೊಲೀಸರು ಅನುಮಾನ ವ್ಯಕ್ತಪಡಿಸಿ ತನಿಖೆ ಪ್ರಾರಂಭಿಸಿದಾಗ ಸತ್ಯ ಬಯಲಾಯಿತು. ಬಳಿಕ ಸಿಯಾ ಮತ್ತು ಚೇತನ್ ರನ್ನು ಬಂಧಿಸಲಾಯಿತು.

ಸಿಯಾ ಮತ್ತು ಕೇತನ್ ಅವರ ಕುಟುಂಬಗಳು ಅವರ ಮದುವೆ ನಿಶ್ಚಯಿಸಿದ್ದವು. ಅವರ ಅದ್ಧೂರಿ ವಿವಾಹವು ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಆದರೆ ಈ ಮದುವೆ ಇಷ್ಟ ಪಡದ ಸಿಯಾ, ಪ್ರಿಯಕರ ಚೇತನ್‌ ಜೊತೆ ಸೇರಿ ಕೇತನ್‌ ರನ್ನು ಹತ್ಯೆ ಮಾಡಿದ್ದಾಳೆ.

Dailyhunt
Disclaimer: This content has not been generated, created or edited by Dailyhunt. Publisher: Udayavani