Dailyhunt
Puttur: ಕೆದಂಬಾಡಿ: ಬೈಕ್ ಚರಂಡಿಗೆ ಬಿದ್ದು ಸವಾರರು ಗಾಯ

Puttur: ಕೆದಂಬಾಡಿ: ಬೈಕ್ ಚರಂಡಿಗೆ ಬಿದ್ದು ಸವಾರರು ಗಾಯ

ಪುತ್ತೂರು: ತಾಲೂಕಿನ ಕೆದಂಬಾಡಿ ಗ್ರಾಮದ ತ್ಯಾಗರಾಜದಲ್ಲಿ ಬೈಕೊಂದು ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಸವಾರರು ಗಾಯಗೊಂಡ ಘಟನೆ ಎ. 6ರಂದು ರಾತ್ರಿ ನಡೆದಿದೆ.

ಘಟನೆಯಲ್ಲಿ ಮಾಡಾವು ನಿವಾಸಿಗಳಾದ ಬೈಕ್ ಸವಾರ ಇರ್ಷಾನ್ ಹಾಗೂ ಸಹಸವಾರ ಮುಹಾಬ್ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಮುಹಾಬ್ ಅವರು ಬೆಂಗಳೂರಿಗೆ ಹೋಗುವ ಹಿನ್ನೆಲೆಯಲ್ಲಿ ಇರ್ಷಾನ್ ಜತೆ ಬೈಕಿನಲ್ಲಿ ಪುತ್ತೂರು ಬಸ್ಸು ನಿಲ್ದಾಣಕ್ಕೆ ಆಗಮಿಸುತ್ತಿದ್ದಾಗ ಘಟನೆ ನಡೆದಿದೆ.

ಬೈಕ್ ತ್ಯಾಗರಾಜಕ್ಕೆ ತಲುಪುತ್ತಿದ್ದಂತೆ ಸವಾರನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಬಂದು ಚರಂಡಿಗೆ ಬಿದ್ದಿದೆ. ಈ ವೇಳೆ ಗಾಯಗೊಂಡ ಸವಾರರನ್ನು ಅವರ ಪರಿಚಯದ ಅಬ್ದುಲ್ ಶಾಕೂರ್ ಅವರು ಕಾರಿನಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani