Dailyhunt
ರಾಧೆಯ ಹುಡುಕಿ ಹೊರಟ ಬೃಂದಾ ವಿಹಾರಿ

ರಾಧೆಯ ಹುಡುಕಿ ಹೊರಟ ಬೃಂದಾ ವಿಹಾರಿ

ಣೇಶ್‌ ನಾಯಕರಾಗಿರುವ "ಬೃಂದಾ ವಿಹಾರಿ' ಚಿತ್ರದ ಎರಡನೇ ಹಾಡು "ರಾಧಾ ರಾಧಾ...' ಬಿಡುಗಡೆಯಾಗಿದೆ. ಸಮೃದ್ಧಿ ವಿ.ಮಂಜುನಾಥ್‌ ನಿರ್ಮಾಣದ ಹಾಗೂ ಶ್ರೀನಿವಾಸರಾಜು ನಿರ್ದೇಶನದ ಸಿನಿಮಾದ ಮೊದಲ ಹಾಡು ಈಗಾಗಲೇ ಬಿಡುಗಡೆಯಾಗಿದೆ.

ವಿ.ನಾಗೇಂದ್ರ ಪ್ರಸಾದ್‌ ಬರೆದಿರುವ, ಹೇಶಮ್‌ ಅಬ್ದುಲ್‌ ವಹಾಬ್‌ ಸಂಗೀತ ನೀಡಿರುವ, ಸಿದ್‌ ಶ್ರೀರಾಮ್‌ ಮತ್ತು ಚಿನ್ಮಯಿ ಹಾಡಿರುವ ಹಾಗೂ ಗಣೇಶ್‌ - ದೇವಿಕಾ ಭಟ್‌ ಅಭಿನಯಿಸಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

"ಬೃಂದಾ ವಿಹಾರಿ ಚಿತ್ರ ದಲ್ಲಿ 7 ಹಾಡುಗಳಿವೆ. ಈಗ ಎರಡನೇ ಹಾಡು ಅನಾವರಣವಾಗಿದೆ. ಈ ಸಂದರ್ಭದಲ್ಲಿ ನಾನು ನಿರ್ಮಾಪಕ ಸಮೃದ್ಧಿ ಮಂಜುನಾಥ್‌, ನಾಯಕ ಗಣೇಶ್‌ ಹಾಗೂ ಸಂಗೀತ ನಿರ್ದೇಶಕ ಹೇಶಮ್‌ ಅಬ್ದುಲ್‌ ನವಾಬ್‌ ಅವರಿಗೆ ಧನ್ಯವಾದ ಹೇಳುತ್ತೇನೆ. ಉಳಿದ ಹಾಡುಗಳು ಸಹ ಸುಮಧುರವಾಗಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ' ಎನ್ನುವುದು ನಿರ್ದೇಶಕ ಶ್ರೀನಿವಾಸರಾಜು ಮಾತು.

"ಇದು ನನ್ನ ಮೊದಲ ಚಿತ್ರ. ಗಣೇಶ್‌ ಅವರ ಜೊತೆಗೆ ನಟಿಸಿದ್ದು ಖುಷಿಯಾಗಿದೆ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಧನ್ಯವಾದ' ಎಂದರು ನಾಯಕಿ ದೇವಿಕಾ ಭಟ್‌.

Dailyhunt
Disclaimer: This content has not been generated, created or edited by Dailyhunt. Publisher: Udayavani