ವಿಜಯಪುರ: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಆಡಳಿತದ ದುವಸ್ಥೆ ಬಗ್ಗೆ ಆಡಳಿತ ಪಕ್ಷದ ಸಂಪುಟ ಸಚಿವ ಯೋಗೇಶ್ವರ, ಶಾಸಕ ಯತ್ನಾಳ ಅವರೇ ಸಾರ್ವಜನಿಕವಾಗಿ ಬಹಿರಂಗ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಯಡಿಯೂರಪ್ಪ ಸರ್ಕಾರದ ದುರಾಡಳಿತದ ಹೇಳುವ ಅಗತ್ಯವೇ ಇಲ್ಲ ಎಂದು ಕೆಪಿಸಿಸಿ ವಕ್ತಾರಾದ ಮೇಲ್ಮನೆ ಶಾಸಕ ಪ್ರಕಾಶ ರಾಠೋಡ ಕುಟುಕಿದ್ದಾರೆ.
ಮೋದಿ ತೋಟದ ಮಾಲಿಯಲ್ಲ, ಇದ್ದಿಲು ಮಾರಾಟಗಾರ: ಕೆಪಿಸಿಸಿ ವಕ್ತಾರ ರಾಠೋಡ ವಾಗ್ದಾಳಿ
ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ರಾಠೋಡ, ಕೋವಿಡ್ ನಿರ್ವಹಣೆ ಮರೆತ ಸರ್ಕಾರ, ಔಷಧಿ, ಲಸಿಕೆ ನೀಡುವಲ್ಲಿ ಲೋಪ ಮಾಡಿದ್ದೇ ಸಾವು ಹೆಚ್ಚಲು ಕಾರಣ.
ಮೋದಿ ಅವರು ಅಧಿಕಾರಕ್ಕೆ ಬರುತ್ತಲೇ ರಫ್ತು ನೀತಿಯನ್ನು ಕೂಡ ಹದಗೆಡಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ದೇಶದ ಕಚ್ಚಾ ಹಾಗೂ ಸಿದ್ಧ ವಸ್ತುಗಳಿಗೆ ಬೇಡಿಕೆ ಇದ್ದರೂ ರಫ್ತು ಕುಸಿತ ಮಾಡಿದ್ದಾರೆ. ಪರಿಣಾಮ ದೇಶಿ ರೈತರ ರೇಷ್ಮೆ ಸೇರಿದಂತೆ ಬಹುತೇಕ ಉತ್ಪನ್ನಕ್ಕೆ ಬೇಡಿಕೆ ಕುಸಿತವಾಗಿ, ಚೀನಾ ವಸ್ತುಗಳ ಆಮದು ಹೆಚ್ಚಿದೆ ಎಂದು ಪ್ರಕಾಶ ರಾಠೋಡ ದೂರಿದರು.

