Dailyhunt Logo
  • Light mode
    Follow system
    Dark mode
    • Play Story
    • App Story
ರಾಜ್ಯಾದ್ಯಂತ ಮತ್ತೆ ಬೈಕ್‌ ಆಯಂಬುಲೆನ್ಸ್‌ ಕಾರ್ಯಾಚರಣೆ

ರಾಜ್ಯಾದ್ಯಂತ ಮತ್ತೆ ಬೈಕ್‌ ಆಯಂಬುಲೆನ್ಸ್‌ ಕಾರ್ಯಾಚರಣೆ

ಬೆಂಗಳೂರು: ಇದುವರೆಗೆ ಸ್ಥಗಿತಗೊಳಿಸಿದ್ದ ಬೈಕ್‌ ಆಯಂಬುಲೆನ್ಸ್‌ಗಳು ರಾಜ್ಯಾದ್ಯಂತ ಮತ್ತೆ ರಸ್ತೆಗಿಳಿಯಲು ಸಿದ್ದತೆ ನಡೆದಿದ್ದು, ಇದೀಗ 100 ಬೈಕ್‌ ಆಯಂಬುಲೆನ್ಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಇದಕ್ಕೆ ನರ್ಸಿಂಗ್‌ ಪದವೀಧರರನ್ನು ಬಳಸಲಾಗುತ್ತಿದೆ.

ರಸ್ತೆ ಅಪಘಾತಗಳಿಂದ ಸಂಭವಿಸುತ್ತಿದ್ದ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ಸಂಚಾರ ದಟ್ಟಣೆಯ ನಡುವೆ ಆದಷ್ಟು ಶೀಘ್ರ ವೈದ್ಯಕೀಯ ಸೇವೆ ಒದಗಿಸುವುದು ಬೈಕ್‌ ಆಯಂಬುಲೆನ್ಸ್‌ಗಳ ಉದ್ದೇಶವಾಗಿದೆ.

ರಾಜ್ಯದ ವಿವಿಧ ನಗರ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿ ವಿವಿಧೆಡೆ ಈ ಬೈಕ್‌ ಆಯಂಬುಲೆನ್ಸ್‌ಗಳು ಕಾರ್ಯಾಚರಿಸಲಿವೆ. ಅಪಘಾತ ಹೃದಯಾಘಾತದ ಸಂದರ್ಭದಲ್ಲಿ ತ್ವರಿತ ಚಿಕಿತ್ಸೆ ಒದಗಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ತುರ್ತು ಸಂದರ್ಭಗಳಲ್ಲಿ ರೋಗಿಗೆ ತ್ವರಿತವಾಗಿ ಚಿಕಿತ್ಸೆ ಕಲ್ಪಿಸಲು ನೆರವಾಗಲಿವೆ. ಸಂಚಾರ ದಟ್ಟಣೆ ಸೇರಿ ವಿವಿಧ ಕಾರಣಗಳಿಂದ ನಿಗದಿತ ಸ್ಥಳವನ್ನು ಕಡಿಮೆ ಅವಧಿಯಲ್ಲಿ ತಲುಪಲು 108 ಆಯಂಬುಲೆನ್ಸ್‌ಗೆ ಕಷ್ಟವಾಗುತ್ತಿವೆ. ರೋಗಿಯನ್ನು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯುವ ಆಯಂಬುಲೆನ್ಸ್‌ನ ಸಮಯದ ಮಿತಿ (ಗೋಲ್ಡನ್‌ ಅರ್ವ) 20 ನಿಮಿಷವಾಗಿದೆ. ಈ ಸಮಯದ ಮಿತಿಯೊಳಗೆ ರೋಗಿಯನ್ನು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯುಲು ಬಹಳಷ್ಟು ಬಾರಿ ಸಾಧ್ಯವಾಗುವುದಿಲ್ಲ. ಹೀಗಾಗಿ ಬೈಕ್‌ ಆಯಂಬುಲೆನ್ಸ್‌ಗಳಿಗೆ ಮತ್ತೆ ಆದ್ಯತೆ ನೀಡಲಾಗಿದೆ.

ಬೈಕ್‌ ಆಯಂಬುಲೆನ್ಸ್‌ಗಳಲ್ಲಿ ಏನೆಲ್ಲ ಸೌಲಭ್ಯಗಳಿರಲಿವೆ?

ಬೈಕ್‌ ಆಯಂಬುಲೆನ್ಸ್‌ಗಳ ಸೇವೆಗೆ ನರ್ಸಿಂಗ್‌ ಪದವೀಧರರನ್ನು ನೇಮಿಸಿಕೊಳ್ಳಲಾಗುತ್ತಿದೆ. ಗುÉಕೊಮೀಟರ್‌, ಆಕ್ಸಿಜನ್‌ ಸಿಲಿಂಡರ್‌, ಹೃದಯಬಡಿತ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಉಪಕರಣಗಳು, ಇನ್‌ಕುÂಬೇಟರ್‌ಕಿಟ್‌, ಬ್ಯಾಂಡೇಜ್‌, ಜೀವರಕ್ಷಕ ಔಷಧಗಳು ಮತ್ತು ಉಪಕರಣಗಳು ಇರಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani