Sunday, 24 Jan, 9.00 pm ಉದಯವಾಣಿ

ಟಾಪ್ 10 ಸುದ್ದಿ
ರಾಮಮಂದಿರ ನಿರ್ಮಾಣಕ್ಕೆ ಪವನ್ ಕಲ್ಯಾಣ್ ನೀಡಿದ ದೇಣಿಗೆ ಎಷ್ಟು ಗೊತ್ತಾ?

ಮುಂಬೈ: ಅಯೋಧ್ಯಾ ಶ್ರೀ ರಾಮಮಂದಿರದ ನಿರ್ಮಾಣದ ಹಿನ್ನೆಲೆಯಲ್ಲಿ ಹಲವಾರು ತಾರೆಯರನ್ನು ಒಳಗೊಂಡಂತೆ ರಾಜಕೀಯ ದಿಗ್ಗಜರು ದೇಣಿಗೆ ನೀಡುತ್ತಿದ್ದಾರೆ. ಇದೀಗ ಈ ಸಾಲಿನಲ್ಲಿ ಟಾಲಿವುಡ್ ನ ಖ್ಯಾತ ನಟ ಪವನ್ ಕಲ್ಯಾಣ್ ಕೂಡಾ ಸೇರಿಕೊಂಡಿದ್ದಾರೆ.

ನಟ ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ್ ಶ್ರೀ ರಾಮಮಂದಿರದ ನಿರ್ಮಾಣ ಕಾರ್ಯಕ್ಕಾಗಿ ಬರೋಬ್ಬರಿ 30 ಲಕ್ಷ ರೂ. ಗಳ ದೇಣಿಗೆ ನೀಡಿದ್ದು, ಆ ಮೂಲಕ ರಾಮಮಂದಿರದ ನಿರ್ಮಾಣಕ್ಕೆ ನಾವೆಲ್ಲರೂ ಕೈ ಜೋಡಿಸಬೇಕಿದೆ ಎಂದು ಕೆರೆಕೊಟ್ಟಿದ್ದಾರೆ.

ಶ್ರೀ ರಾಮನು ಧರ್ಮ ಹಾಗೂ ತಾಳ್ಮೆಯ ಪ್ರತೀಕವಾಗಿದ್ದಾನೆ. ಧೈರ್ಯದ ವಿಚಾರದಲ್ಲಿಯೂ ನಮಗೆಲ್ಲರಿಗೂ ಆತ ಸ್ಪೂರ್ತಿಯಾಗಿ ನಿಲ್ಲುತ್ತಾನೆ. ಭಾರತ ಹಿಂದಿನಿಂದಲೂ ಹಲವಾರು ದಾಳಿಗಳನ್ನು ಎದುರಿಸಿ ಗೆದ್ದಿದೆ. ಇದಕ್ಕೆ ಶ್ರೀ ರಾಮ ಹಾಕಿಕೊಟ್ಟ ದಾರಿಯೇ ಕಾರಣ ಎಂದು ನಟ ಪವನ್ ಕಲ್ಯಾಣ್ ಅಭಿಪ್ರಾಯ ಪಟ್ಟಿದ್ದಾರೆ.

2022ಕ್ಕೆ ತೆರೆಮೇಲೆ ಬರಲಿದ್ದಾನೆ 'ಬಚ್ಚನ್ ಪಾಂಡೆ'

ನಾನು ರಾಮ ಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂ ಗಳನ್ನು ನೀಡಿದ್ದೇನೆ. ನಾನು ದೇಣಿಗೆ ನೀಡುವುದನ್ನು ಗಮನಿಸಿದ ನನ್ನ ಜೊತೆಗಾರರೂ, ಸಹೋದ್ಯೋಗಿಗಳೂ ಕೂಡ ದೇಣಿಗೆ ನೀಡಿದ್ದು, ಅವರಲ್ಲಿ ಹಿಂದೂಗಳನ್ನು ಒಳಗೊಂಡಂತೆ ಹಲವು ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರೂ ಇದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸ‍ದ್ಯ ಶ್ರೀರಾಮ್ ವೇಣು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವಕೀಲ್ ಸಾಬ್' ಸಿನಿಮಾ ತೆರೆಮೇಲೆ ಬರಲು ಸಿದ್ಧವಾಗಿದ್ದು, ಈ ಸಿನಿಮಾದಲ್ಲಿ ನಟ ಪವನ್ ಕಲ್ಯಾಣ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top