Dailyhunt Logo
  • Light mode
    Follow system
    Dark mode
    • Play Story
    • App Story
Raichur: ಬರ ಛಾಯೆ: ಕೊಡಗಳಿಂದ ನೀರುಣಿಸಿ ಬೆಳೆ ರಕ್ಷಣೆಗೆ ನಿಂತ ರೈತ!

Raichur: ಬರ ಛಾಯೆ: ಕೊಡಗಳಿಂದ ನೀರುಣಿಸಿ ಬೆಳೆ ರಕ್ಷಣೆಗೆ ನಿಂತ ರೈತ!

ರಾಯಚೂರು: ಜಿಲ್ಲೆಯಲ್ಲಿ ಮಳೆಯ ಕೊರತೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಕ್ರಮೇಣ ಬರದ ಛಾಯೆ ಆವರಿಸುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆ ಸುರಿಯದ ಪರಿಣಾಮ ರೈತರು ಬೆಳೆ ಉಳಿಸಿಕೊಳ್ಳಲು ಕೊಡಗಳಿಂದ ಬೆಳೆಗೆ ನೀರು ಹಾಕುವ ಹರಸಾಹಸ ಮಾಡುತ್ತಿದ್ದಾರೆ.

ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ನೀರಿನ ಅಭಾವದಿಂದ ಬಾಡಲಾರಂಭಿಸಿವೆ.

ಬೆಳೆ ಕೈತಪ್ಪದಂತೆ ಮಾಡಲು ರೈತರು ಬ್ಯಾರಲ್‌ಗಳಲ್ಲಿ ನೀರು ತಂದು, ಕೊಡಗಳ ಮೂಲಕ ಒಂದೊಂದು ಗಿಡಕ್ಕೆ ನೀರುಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗೆ ನೀರುಣಿಸುವ ಕೆಲಸಕ್ಕಾಗಿ ಕೂಲಿ ಕಾರ್ಮಿಕರನ್ನು ನಿಯೋಜಿಸಿರುವ ರೈತರು; ಇದಕ್ಕಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ.

"ಇನ್ನೂ ಕೆಲವೇ ದಿನಗಳಲ್ಲಿ ಉತ್ತಮ ಮಳೆ ಬರದಿದ್ದರೆ ಬೆಳೆಗಳನ್ನು ಉಳಿಸಿಕೊಳ್ಳುವುದು ಅಸಾಧ್ಯ" ಎಂದು ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಮುಂಗಾರು ಮಳೆ ಈ ವೇಳೆಗಾಗಲೆ ಬರಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಮಳೆ ಕೊರತೆ ಬಹುವಾಗಿ ಕಾಡುತ್ತಿದೆ. ಜಿಲ್ಲೆಯ ಕೆಲವೆಡೆ ಮಾತ್ರ ಉತ್ತಮ ಮಳೆಯಾಗಿದ್ದು, ಆದರೆ ಬಹುತೇಕ ಕಡೆ ಮಳೆ ಕೊರತೆ ಕಂಡು ಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani