Dailyhunt
ರೆಮಿಡಿಸಿವಿರ್‌ ಅಕ್ರಮ ಮಾರಾಟ: ನಾಲ್ವರ ಬಂಧನ

ರೆಮಿಡಿಸಿವಿರ್‌ ಅಕ್ರಮ ಮಾರಾಟ: ನಾಲ್ವರ ಬಂಧನ

ಬೆಂಗಳೂರು : ಕೊರೊನಾಕ್ಕೆ ಪರಿಣಾಮಕಾರಿ ಔಷಧವಾಗಿರುವ ರೆಮಿಡೆಸಿಯರ್‌ ಅನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರು ಮೆಡಿಕಲ್‌ ಸ್ಟೋರ್‌ ಮಾಲಕರ ಸಹಿತ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಸೋನಾಲಿಕಾ ಮೆಡಿಕಲ್‌ ಸ್ಟೋರ್‌ನ ಹುಜೇಫಾ, ಮೆಡಿಕಲ್‌ ಸ್ಟೋರ್‌ ನಿರ್ವಾಹಕ ಮ್ಯಾಟೀನ್‌, ಕಾರ್ತಿಕೇಯ ಮೆಡಿಕಲ್‌ ಡಿಸ್ಟ್ರಿಬ್ಯೂಟರ್‌ನ ಕೆ.ಪಿ.ಸುಮನ್‌, ವೆಂಕಟೇಶ್ವರ ಮೆಡಿಕಲ್‌ನ ಪ್ರಕಾಶ್‌ ಬಂಧಿತರು. ಅವರಿಂದ 55 ರೆಮಿಡಿಸಿವಿರ್‌ ಇಂಜೆಕ್ಷನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಟ್ಟು 16 ಮಂದಿ ಸೆರೆ
ಕಾಳಸಂತೆಯಲ್ಲಿ ರೆಮಿಡಿಸಿವಿಯರ್‌ ಮಾರಾಟ ವಿರುದ್ಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ಮೇರೆಗೆ ಕಾರ್ಯಾಚರಣೆಗಿಳಿದ ಸಿಸಿಬಿ ಪೊಲೀಸರು ಇದುವರೆಗೆ 16 ಮಂದಿಯನ್ನು ಬಂಧಿಸಿದ್ದು, ವಿವಿಧ ಪೊಲೀಸ್‌ ಠಾಣೆಗಳಲ್ಲಿ ಆರು ಪ್ರಕರಣಗಳನ್ನು ದಾಖಲಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani