Dailyhunt Logo
  • Light mode
    Follow system
    Dark mode
    • Play Story
    • App Story
ರಿಲಯನ್ಸ್‌  ಡಿಜಿಟಲ್‌ ತಂದಿದೆ ಡಿಜಿಟಲ್‌ ಇಂಡಿಯಾ ಸೇಲ್‌ ಕ್ರೇಜಿ ಆಫರ್‌

ರಿಲಯನ್ಸ್‌ ಡಿಜಿಟಲ್‌ ತಂದಿದೆ ಡಿಜಿಟಲ್‌ ಇಂಡಿಯಾ ಸೇಲ್‌ ಕ್ರೇಜಿ ಆಫರ್‌

ಮುಂಬಯಿ: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಚಿಲ್ಲರೆ ವ್ಯಾಪಾರಿಯಾದ ರಿಲಯನ್ಸ್‌ ಡಿಜಿಟಲ್‌, ತನ್ನ ಐಕಾನಿಕ್‌ ಡಿಜಿಟಲ್‌ ಇಂಡಿಯಾ ಸೇಲ್‌ಗೆ ಹೊಸ ಆಯಾಮವನ್ನು ನೀಡಲು ಟಿಜಿಟಲ್‌ ಇಂಡಿಯಾ ಸೇಲ್‌ ಕ್ರೇಜಿ ಆಫರ್‌ ((D.I.S.C.O. Digital India Sale Crazy Offers) ಅನ್ನು ಪ್ರಾರಂಭಿಸಿದೆ.

ಆ. 16ರ ವರೆಗೆ ರಿಲಯನ್ಸ್‌ ಡಿಜಿಟಲ್‌ ಸ್ಟೋರ್‌ಗಳು, ರಿಲಯನ್ಸ್‌ ಡಿಜಿಟಲ್‌. ಇನ್‌ ಜಾಲತಾಣ ಮತ್ತು ಮೈ ಜಿಯೋ ಸ್ಟೋರ್ಸ್‌ ನಲ್ಲಿ ನಡೆಯುವ ಈ ಅಭಿಯಾನವು ಸ್ಮಾರ್ಟ್‌ಫೋನ್‌ಗಳು, ಟಿವಿಗಳು, ಲ್ಯಾಪ್‌ ಟಾಪ್‌ಗ್ಳು, ಗೃಹೋಪಯೋಗಿ ವಸ್ತುಗಳು, ಹೆಚ್ಚಿನವುಗಳ ಮೇಲೆ ಅದ್ಭುತ ಆಫರ್‌ಗಳನ್ನು ತಂದಿದೆ.

ಗ್ರಾಹಕರ ಎಲೆಕ್ಟ್ರಾನಿಕ್ಸ್‌ ಮತ್ತು ಉಪಕರಣಗಳ ಮೇಲಿನ ಈ ಸೀಸನ್‌ ನ ಅತ್ಯುತ್ತಮ ಡೀಲ್‌ಗ‌ಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ಹೆಚ್ಚಿನ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್‌ ಮೇಲೆ 10,000 ರೂ.ವರೆಗೆ ವಿನಿಮಯ ಬೋನಸ್‌, ಎರಡನೇ ಉತ್ಪನ್ನದ ಖರೀದಿಯ ಮೇಲೆ 50 ಶೇ. ವರೆಗಿನ ಫ್ಲಾಟ್‌ ರಿಯಾಯಿತಿ, ಬ್ಯಾಂಕ್‌ ಕಾರ್ಡ್‌, ಫೈನಾನ್ಸ್‌ ಮತ್ತು ಯುಪಿಐ ಮೂಲಕ 30,000 ರೂ.ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಒಂದು ವರ್ಷದ ಉಚಿತ ವಿಸ್ತೃತ ವಾರಂಟಿ ಅನ್ನು ನೀಡುತ್ತದೆ.

ರಿಲಯನ್ಸ್‌ ಡಿಜಿಟಲ್‌ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್‌ ಚಿಲ್ಲರೆ ವ್ಯಾಪಾರಿಯಾಗಿದ್ದು, 800ಕ್ಕೂ ಹೆಚ್ಚು ನಗರಗಳಲ್ಲಿ 620+ ಕ್ಕೂ ಹೆಚ್ಚು ದೊಡ್ಡ ಸ್ವರೂಪದ ರಿಲಯನ್ಸ್‌ ಡಿಜಿಟಲ್‌ ಸ್ಟೋರ್‌ ಗಳು ಮತ್ತು 900+ ಮೈ ಜಿಯೋ ಸ್ಟೋರ್‌ಗಳನ್ನು ಹೊಂದಿದೆ, ದೇಶದ ಮೂಲೆ ಮೂಲೆಯಲ್ಲಿರುವ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. 300ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು ಉತ್ತಮ ಬೆಲೆಯಲ್ಲಿ 5,000ಕ್ಕೂ ಹೆಚ್ಚು ಉತ್ಪನ್ನಗಳನ್ನು ಹೊಂದಿದೆ.

ಖರೀದಿಯ ಸುಲಭತೆಗಾಗಿ, ಗ್ರಾಹಕರು ಯಾವುದೇ ರಿಲಯನ್ಸ್‌ ಡಿಜಿಟಲ್‌ ಸ್ಟೋರ್‌ಗೆ ಭೇಟಿ ನೀಡಬಹುದು ಅಥವಾ www.reliancedigital.inನಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡಬಹುದು.

Dailyhunt
Disclaimer: This content has not been generated, created or edited by Dailyhunt. Publisher: Udayavani