Dailyhunt Logo
  • Light mode
    Follow system
    Dark mode
    • Play Story
    • App Story
RSS  ರೀತಿ ತರಬೇತಿಗೆ ಹಲವು ದೇಶಗಳಿಂದ ಮನವಿ: ಮೋಹನ್‌ ಭಾಗವತ್‌

RSS ರೀತಿ ತರಬೇತಿಗೆ ಹಲವು ದೇಶಗಳಿಂದ ಮನವಿ: ಮೋಹನ್‌ ಭಾಗವತ್‌

ನಾಗ್ಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌)ದ ಕಾರ್ಯವನ್ನು ನೋಡಿ ತಮ್ಮ ದೇಶದಲ್ಲಿನ ಯುವ ಸಮೂಹಕ್ಕೆ ಆರ್‌ಎಸ್‌ಎಸ್‌ ರೀತಿಯಲ್ಲೇ ತರಬೇತಿ ನೀಡುವಂತೆ ವಿಶ್ವದೆಲ್ಲೆಡೆಯಿಂದ ದೇಶಗಳು ಕೇಳುತ್ತಿವೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಶುಕ್ರವಾರ ಹೇಳಿದ್ದಾರೆ.

'ಡಾ.ಹೆಡ್ಗೇವಾರ್‌: ಆಧುನಿಕ್‌ ಯುಗ್‌ ಕೇ ಶಾಲಿವಾಹನ್‌' ಎಂಬ ಯೂಟ್ಯೂಬ್‌ ವಿಡಿಯೋನ ಸಾರ್ವಜನಿಕ ಪ್ರಸಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜತೆಗೆ ಸಂಘದ ಶತಮಾನೋತ್ಸವದ ಭಾಗವಾಗಿ ಆರ್‌ಎಸ್‌ಎಸ್‌ ಪ್ರಚಾರಕದ ಜೀವನದ ಕುರಿತು 100 ವಿಡಿಯೋಗಳನ್ನು ಬಿಡುಗಡೆ ಮಾಡಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಸಮ್ಮುಖದಲ್ಲಿ ಭಾಗವತ್‌ ಅವರು ಜುಲೈ 5 ರಂದು 'ಸನ್ಮಾರ್ಗ್ ಮೈಂಡ್ ವೆಲ್‌ನೆಸ್ ಸೆಂಟರ್' ಅನ್ನು ಉದ್ಘಾಟಿಸಲಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani