ಕೋಟ: ಸಾಸ್ತಾನದ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಯ ಮೇಲೆ ಕೋಟ ಠಾಣೆಯ ತನಿಖಾ ವಿಭಾಗದ ಉಪನಿರೀಕ್ಷಕ ಮಹಾಂತೇಶ್ ಜಾಬಗೌಡ ಅವರ ತಂಡ ಜು.3 ರಂದು ದಾಳಿ ನಡೆಸಿ ಶಶಿಧರ (30) ಪಾಂಡೇಶ್ವರ ಸಾಸ್ತಾನ ನನ್ನು ವಶಕ್ಕೆ ಪಡೆದು ಜುಗಾರಿ ಸಾಮಗ್ರಿ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಸ್ಥಳದಲ್ಲಿದ್ದ ಕೆಲವರು ಪರಾರಿಯಾಗಿದ್ದಾರೆ.
ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

