Dailyhunt Logo
  • Light mode
    Follow system
    Dark mode
    • Play Story
    • App Story
ಸಾವರ್ಕರ್‌ ಅವರನ್ನು ಮುಸ್ಲಿಮರ ಕಡು ವಿರೋಧಿ ಎಂಬಂತೆ ರಾಹುಲ್‌ ಬಿಂಬಿಸಿದ್ದಾರೆ: ಸತ್ಯಕಿ

ಸಾವರ್ಕರ್‌ ಅವರನ್ನು ಮುಸ್ಲಿಮರ ಕಡು ವಿರೋಧಿ ಎಂಬಂತೆ ರಾಹುಲ್‌ ಬಿಂಬಿಸಿದ್ದಾರೆ: ಸತ್ಯಕಿ

ಮುಂಬೈ: 2023 ರಲ್ಲಿ ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾವರ್ಕರ್ ಅವರನ್ನು "ಮುಸ್ಲಿಮರ ತೀವ್ರ ದ್ವೇಷಿ" ಎಂದು ಬಿಂಬಿಸಿದ್ದಾರೆ ಎಂದು ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಅವರ ಮರಿ ಮೊಮ್ಮಗ ಸತ್ಯಕಿ ಸಾವರ್ಕರ್ ಪುಣೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪುಣೆ ಕೋರ್ಟ್‌ ನಲ್ಲಿ ರಾಹುಲ್‌ ಗಾಂಧಿ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆ ಕುರಿತ ಪಾಟಿ ಸವಾಲಿನ ವೇಳೆ, ವಕೀಲ ಮಿಲಿಂದ್‌ ಪವಾರ್‌ ಅವರು, ವಿ.ಡಿ. ಸಾವರ್ಕರ್‌ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಯಾವ ಹೇಳಿಕೆಯನ್ನು ರಾಹುಲ್‌ ಗಾಂಧಿ ನೀಡಿದ್ದಾರೆ ಎಂಬ ಬಗ್ಗೆ ನಿಖರ ಅಂಶ ಹೇಳಿ ಎಂದು ಸತ್ಯಕಿ ಅವರನ್ನು ಪ್ರಶ್ನಿಸಿದ್ದರು.

"ಸಾವರ್ಕರ್ ಅವರು ಮತ್ತು ಐದರಿಂದ ಆರು ಸ್ನೇಹಿತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ ಕೃತ್ಯದಿಂದ ಸಂತೋಷಗೊಂಡಿರುವುದಾಗಿ ಪುಸ್ತಕದಲ್ಲಿ ಬರೆದಿದ್ದಾರೆ" ಎಂಬ ರಾಹುಲ್‌ ಭಾಷಣದ ಹೇಳಿಕೆಯನ್ನು ಸಾತ್ಯಕಿ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಈ ಶಬ್ದವನ್ನು ಬಳಸುವ ಮೂಲಕ ರಾಹುಲ್‌ ಗಾಂಧಿಯವರು ಸಾವರ್ಕರ್‌ ತೀವ್ರ ಮುಸ್ಲಿಂ ದ್ವೇಷಿ ಎಂಬಂತೆ ಬಿಂಬಿಸಿದ್ದಾರೆ. ಆದರೆ ಸಾವರ್ಕರ್‌ ಯಾವತ್ತೂ ಮುಸ್ಲಿಂ ದ್ವೇಷಿಯಾಗಿರಲಿಲ್ಲ. ಅಲ್ಲದೇ ಸಾವರ್ಕರ್‌ ಅವರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆಂಬ ರಾಹುಲ್‌ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಸಾವರ್ಕರ್‌ ಅವರ ಯಾವುದೇ ಲೇಖನದಲ್ಲೂ ಆ ಘಟನೆ ಉಲ್ಲೇಖವಾಗಿಲ್ಲ ಎಂದು ಸತ್ಯಕಿ ಕೋರ್ಟ್‌ ವಿಚಾರಣೆ ವೇಳೆ ತಿಳಿಸಿದ್ದಾರೆ.

ಮಂಗಳವಾರ (ಸೆ.01) ನಡೆದ ವಿಚಾರಣೆ ವೇಳೆ ಗಾಂಧಿ ಪರ ವಕೀಲ ಪವಾರ್‌ ಅವರು ಸತ್ಯಕಿ ಅಜ್ಜ ಗೋಪಾಲ್‌ ಗೋಡ್ಸೆ 2004ರಲ್ಲಿ ನೀಡಿದ್ದ ವಿಡಿಯೋ ಸಂದರ್ಶನವನ್ನು ಕೋರ್ಟ್‌ ಗೆ ನೀಡಿದ್ದರು. ಮಹಾತ್ಮ ಗಾಂಧಿಯ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದಾರೆನ್ನಲಾದ ನಾಥೂರಾಮ್‌ ಗೋಡ್ಸೆ ಸಹೋದರ ಗೋಪಾಲ್‌ ಗೋಡ್ಸೆ ಅವರು ಸಂದರ್ಶನದಲ್ಲಿ ನಾಥೂರಾಮ್‌ ಅವರು ಆರ್‌ ಎಸ್‌ ಎಸ್‌ ಸದಸ್ಯರಾಗಿದ್ದರು ಎಂಬುದನ್ನು ಉಲ್ಲೇಖಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani