ರಾಂಚಿ: ಇಲ್ಲಿ ನಡೆಯುತ್ತಿರುವ ಸಬ್ ಜೂನಿಯರ್ ಮಹಿಳಾ ರಾಷ್ಟ್ರೀಯ ಹಾಕಿ ಚಾಂಪಿಯನ್‌ಶಿಪ್‌ನ ಎರಡನೇ ದಿನದ ಪಂದ್ಯಗಳಲ್ಲಿ ಗೋವಾ, ಬಂಗಾಲ, ಚಂಡೀಗಢ ಹಾಗೂ ಉತ್ತರಾಖಂಡ ತಂಡಗಳು ಭರ್ಜರಿ ಜಯ ಸಾಧಿಸಿವೆ.
ಉತ್ತರಾಖಂಡ ವಿರುದ್ಧದ 'ಪೂಲ್ ಬಿ' ಪಂದ್ಯದಲ್ಲಿ ಕರ್ನಾಟಕ 1 6 ಗೋಲುಗಳ ಅಂತರದಿಂದ ಪರಾಭವಗೊಂಡಿದೆ.
ಕರ್ನಾಟಕದ ಪರ ಪ್ರೀತಿ ನೀಲರಡ್ಡಿ ಏಕೈಕ ಗೋಲು ಬಾರಿಸಿ ಸಾಂತ್ವನ ತಂದರು. ಉತ್ತರಾಖಂಡದ ಕರೀನಾ ಆರಂಭಿಕ ಹ್ಯಾಟ್ರಿಕ್ ಗೋಲು ಸಿಡಿಸಿ ಮಿಂಚಿದರು.
ಇತರ ಪಂದ್ಯಗಳ ಫಲಿತಾಂಶ
ಮತ್ತೊಂದು ವಿಭಾಗದ ಪಂದ್ಯದಲ್ಲಿ ಗೋವಾ ತಂಡ ತೆಲಂಗಾಣವನ್ನು 6 3 ಗೋಲುಗಳಿಂದ ಮಣಿಸಿದರೆ, ಬಂಗಾಲ 1 0 ಅಂತರದಲ್ಲಿ ದಾದ್ರಾ ನಗರ ಹವೇಲಿ ಮತ್ತು ದಮನ್ ದಿಯು ತಂಡವನ್ನು ಸೋಲಿಸಿತು.
ದಿನದ ಮತ್ತೊಂದು ಏಕಪಕ್ಷೀಯ ಪಂದ್ಯದಲ್ಲಿ ಚಂಡೀಗಢ 12 1 ಗೋಲುಗಳ ಬೃಹತ್ ಅಂತರದಿಂದ ಗುಜರಾತ್ ತಂಡವನ್ನು ಧೂಳೀಪಟ ಮಾಡಿದೆ. ಚಂಡೀಗಢದ ನಾಯಕಿ ಕಾಫಿ ಭರ್ಜರಿ 4 ಗೋಲು ಸಿಡಿಸಿ ತಂಡದ ಗೆಲುವಿನ ರೂವಾರಿಯಾದರು.

