Dailyhunt Logo
  • Light mode
    Follow system
    Dark mode
    • Play Story
    • App Story
ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈಬಿಟ್ಟಿದ್ಯಾಕೆ? ಸ್ಪಷ್ಟನೆ ನೀಡಿದ ಕೋಚ್‌ ಗೌತಮ್‌ ಗಂಭೀರ್

ಸಂಜು ಸ್ಯಾಮ್ಸನ್‌ರನ್ನು ತಂಡದಿಂದ ಕೈಬಿಟ್ಟಿದ್ಯಾಕೆ? ಸ್ಪಷ್ಟನೆ ನೀಡಿದ ಕೋಚ್‌ ಗೌತಮ್‌ ಗಂಭೀರ್

ನಾಟಿಂಗ್‌ಹ್ಯಾಂ: ಟಿ20ಐ ಕ್ರಿಕೆಟ್‌ ನಲ್ಲಿ ಭಾರತದ ಹೀನಾಯ ಸೋಲಿನ ಸರಣಿ ಮುಂದುವರಿದಿದೆ. ಐರ್ಲೆಂಡ್‌ ವಿರುದ್ಧ ಐತಿಹಾಸಿಕ ಸರಣಿ ಸೋಲು ಕಂಡ ಬಳಿಕ ಇದೀಗ ಶ್ರೇಯಸ್‌ ಅಯ್ಯರ್‌ ಪಡೆಯು ಇಂಗ್ಲೆಂಡ್‌ ವಿರುದ್ದ ಸತತ ಎರಡು ಪಂದ್ಯಗಳನ್ನು ಸೋತಿದೆ. ಮಂಗಳವಾರ (ಜು.07) ಟ್ರೆಂಟ್‌ಬ್ರಿಡ್ಜ್‌ ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು ಕೇವಲ 76 ರನ್‌ ಗೆ ಆಲೌಟಾಗಿ, 125 ರನ್‌ ಅಂತರದ ಸೋಲು ಕಂಡಿದೆ.

ಭಾರತ ತಂಡ ಮೂರನೇ ಟಿ20ಐನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿದ ನಂತರ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಪತ್ರಿಕಾಗೋಷ್ಠಿಯ ಕೇಂದ್ರಬಿಂದುವಾಗಿದ್ದರು. 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಕೇವಲ 76 ರನ್‌ಗಳಿಗೆ ಆಲೌಟ್ ಆದ ನಂತರ, 2026 ರ ಟಿ20 ವಿಶ್ವಕಪ್‌ ಹೀರೋ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟ ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ಪ್ರಶ್ನೆಗಳು ಉದ್ಭವಿಸಿದವು.

ಪಂದ್ಯದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಹೆಡ್‌ ಕೋಚ್ ಗಂಭೀರ್, ತಮ್ಮ ಮತ್ತು ಸ್ಯಾಮ್ಸನ್ ನಡುವೆ ವಿಚಾರದ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ ಎಂದು ಹೇಳಿದರು. ಆದರೆ ಸಂಭಾಷಣೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಐರ್ಲೆಂಡ್ ವಿರುದ್ಧದ ಎರಡು ಟಿ20 ಪಂದ್ಯಗಳಲ್ಲಿ ಹಾಗೂ ಇಂಗ್ಲೆಂಡ್ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ವಿಫಲರಾದ ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಬದಲು ಅವಕಾಶ ಪಡೆದ 15 ವರ್ಷದ ವೈಭವ್ ಸೂರ್ಯವಂಶಿ ಕೂಡ ಇನ್ನೂ ಉತ್ತಮ ಪ್ರದರ್ಶನ ನೀಡಿಲ್ಲ. ಆದರೆ, ಭಾರತದ ಟಿ20ಐ ತಂಡದಲ್ಲಿ ಸ್ಯಾಮ್ಸನ್ ಅವರ ಪಾತ್ರದ ಬಗ್ಗೆ ಸಂಪೂರ್ಣ ಸ್ಪಷ್ಟನೆ ನೀಡಿರುವುದಾಗಿ ಗಂಭೀರ್ ಭರವಸೆ ನೀಡಿದರು.

"ಮೊದಲನೆಯದಾಗಿ, ಸಂಜು ಸ್ಯಾಮ್ಸನ್‌ಗೆ ಅಗತ್ಯವಿರುವ ಸ್ಪಷ್ಟತೆಯ ಬಗ್ಗೆ, ಅವರಿಗೆ ನನ್ನ ಕಡೆಯಿಂದ ಅದನ್ನು ನೀಡಲಾಗಿದೆ. ಅದು ಆಟಗಾರ ಮತ್ತು ಮುಖ್ಯ ತರಬೇತುದಾರರ ನಡುವಿನ ಸಂಭಾಷಣೆ ಮಾತ್ರ. ಆ ಸಂಭಾಷಣೆ ಹೊರಗೆ ಬರುವುದಿಲ್ಲ" ಎಂದು ಗಂಭೀರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ಸಂಜು ಬಗ್ಗೆ, ನಾವು ತುಂಬಾ ಸ್ಪಷ್ಟವಾಗಿದ್ದೇವೆ. ಅವರು ಭಾರತಕ್ಕಾಗಿ ನೀಡಿದ ಕೊಡುಗೆ ಅದ್ಭುತ, ಕೆಲವೊಮ್ಮೆ ನೀವು ನಿರ್ದಿಷ್ಟ ಆಟಗಾರನ ಫಾರ್ಮ್ ಕೂಡಾ ನೋಡಬೇಕಾಗುತ್ತದೆ. ಈ ಸರಣಿಯಲ್ಲಿ ಅವರು ಮತ್ತೆ ತಂಡಕ್ಕೆ ಮರಳಲು ಸಾಧ್ಯವಿಲ್ಲ ಎಂಬ ಕಠಿಣ ನಿಯಮವಿಲ್ಲ" ಎಂದು ಅವರು ಹೇಳಿದರು.

ಅಂತಾರಾಷ್ಟ್ರೀಯ ಕ್ರಿಕೆಟ್ ಎಂದರೆ ವೈಯಕ್ತಿಯ ವಿಚಾರದ ಬಗ್ಗೆ ಅಲ್ಲ, ಅದು ತಂಡದ ಸಂಯೋಜನೆ. ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಅವರ ಆರಂಭಿಕ ಸಂಯೋಜನೆಯನ್ನು ಮ್ಯಾನೇಜ್ಮೆಂಟ್ ನಂಬಿದ್ದರಿಂದ ಅವರನ್ನು ತಂಡಕ್ಕೆ ಕರೆತರಲಾಯಿತು. ಆದರೆ, ತಪ್ಪು ಸೂರ್ಯವಂಶಿಯವರದ್ದಲ್ಲ; ಇಡೀ ಭಾರತೀಯ ತಂಡವು ಯುನೈಟೆಡ್ ಕಿಂಗ್ಡಮ್ ಪ್ರವಾಸದಲ್ಲಿ, ಐರ್ಲೆಂಡ್ ವಿರುದ್ಧ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ ಎಂದು ಗಂಭೀರ್ ಹೇಳಿದ್ದಾರೆ

Dailyhunt
Disclaimer: This content has not been generated, created or edited by Dailyhunt. Publisher: Udayavani