ಉಡುಪಿ: ನಗರಸಭೆ ವ್ಯಾಪ್ತಿಯ ಸಂತೆಕಟ್ಟೆ ಕಲ್ಯಾಣಪುರ ಸಂತೆ ಮಾರ್ಕೆಟ್ ಈಗ ಕುಡುಕರ ಮತ್ತು ಇಸ್ಪೀಟ್ ಜೂಜುಕೋರರ ತಾಣವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಹಾಗೂ ಸಮೀಪದ ದೇವಸ್ಥಾನದ ಭಕ್ತರಿಗೆ ತೀವ್ರ ಸಮಸ್ಯೆಯಾಗುತ್ತಿದೆ.
ರವಿವಾರ ಒಂದು ದಿನವನ್ನು ಹೊರತುಪಡಿಸಿ, ವಾರದ ಉಳಿದ ದಿನಗಳಲ್ಲಿ ಸಂಜೆಯಾಗುತ್ತಿದ್ದಂತೆ ಮಾರ್ಕೆಟ್ ಒಳಗಡೆ ಅನಗತ್ಯವಾಗಿ ಪುಂಡ-ಪೋಕರಿಗಳು, ಮದ್ಯವ್ಯಸನಿಗಳು ಬೀಡುಬಿಡುತ್ತಿದ್ದಾರೆ.
ರಾತ್ರಿಯಿಡೀ ಇಲ್ಲಿ ಗಲಭೆ, ಗದ್ದಲಗಳನ್ನು ಸೃಷ್ಟಿಸುತ್ತಾ ಕಾಲ ಕಳೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ದೇವಸ್ಥಾನದ ಪಾವಿತ್ರÂಕ್ಕೆ ಧಕ್ಕೆ, ಭಕ್ತರಿಗೆ ಹಿಂಸೆ ಈ ಸಂತೆ ಮಾರ್ಕೆಟ್‌ನ ಕಾಂಪೌಂಡ್ ಗೋಡೆಯನ್ನು ಹೊಂದಿಕೊಂಡೇ ಶ್ರೀ ವೀರಭದ್ರ ದೇವಸ್ಥಾನವಿದೆ. ಈ ಪುಣ್ಯಕ್ಷೇತ್ರಕ್ಕೆ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಆದರೆ ಮಾರ್ಕೆಟ್ ಒಳಗೆ ಕುಳಿತು ಮದ್ಯಪಾನ ಮಾಡುವ ಪುಂಡರು, ಖಾಲಿ ಬಿಯರ್ ಹಾಗೂ ಮದ್ಯದ ಬಾಟಲಿಗಳನ್ನು ದೇವಸ್ಥಾನದ ಅಂಗಣಕ್ಕೆ ಎಸೆಯುತ್ತಿದ್ದಾರೆ. ಇದು ದೇವಸ್ಥಾನದ ಪಾವಿತ್ರÂಕ್ಕೆ ಧಕ್ಕೆ ತರುತ್ತಿದ್ದು, ದೇವಸ್ಥಾನಕ್ಕೆ ಬರುವ ಮಹಿಳೆಯರು ಮತ್ತು ಭಕ್ತರಿಗೆ ತೀವ್ರ ಮುಜುಗರ ಹಾಗೂ ಮಾನಸಿಕ ಹಿಂಸೆಯನ್ನು ಉಂಟುಮಾಡುತ್ತಿದೆ.
ಸ್ವಚ್ಛತೆಯ ಕೊರತೆ
ಮಾರ್ಕೆಟ್‌ನಲ್ಲಿ ಕನಿಷ್ಠ ಸ್ವಚ್ಛತೆಯೂ ಇಲ್ಲದಂತಾ ಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಈ ಗಂಭೀರ ಸಮಸ್ಯೆಯ ಕುರಿತು ದೇವಸ್ಥಾನದ ಭಕ್ತರು ಈಗಾಗಲೇ ಹಲವಾರು ಬಾರಿ ನಗರಸಭೆಯ ಗಮನಕ್ಕೆ ತಂದಿದ್ದರೂ ಸಹ, ಅಧಿಕಾರಿಗಳು ಯಾವುದೇ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮೂಲ ಸೌಕರ್ಯ ಒದಗಿಸಿ
ದೇವಸ್ಥಾನದ ಭಕ್ತರ ಮತ್ತು ಸ್ಥಳೀಯರ ಹಿತದೃಷ್ಟಿಯಿಂದ ನಗರಸಭೆ ಹಾಗೂ ಪೊಲೀಸ್ ಇಲಾಖೆ ತತ್‌ಕ್ಷಣವೇ ಮಾರ್ಕೆಟ್‌ನಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಪುಂಡರ ಹಾವಳಿಗೆ ತಡೆಯೊಡ್ಡಿ ಸೂಕ್ತ ಭದ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರಾದ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.
ಪ್ರಮುಖ ಬೇಡಿಕೆಗಳು
*ಮಾರ್ಕೆಟ್‌ನ ಸುರಕ್ಷೆಗಾಗಿ ತತ್‌ಕ್ಷಣವೇ ಸಿಸಿ ಕೆಮರಾ ಹಾಗೂ ರಾತ್ರಿ ವೇಳೆ ಪ್ರಖರ ಬೆಳಕಿನ ದೀಪಗಳನ್ನು ಅಳವಡಿಸಬೇಕು.
*ಮಾರ್ಕೆಟ್‌ನ ಕಾಂಪೌಂಡ್ ಮೇಲ್ಭಾಗಕ್ಕೆ ಸೂಕ್ತವಾದ ತಡೆಬೇಲಿ ಅಥವಾ ಕಬ್ಬಿಣದ ಫೆನ್ಸಿಂಗ್ ಅಳವಡಿಸಬೇಕು.
*ರವಿವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ಮಾರ್ಕೆಟ್ ಆವರಣವನ್ನು ಸಂಪೂರ್ಣ ಬಂದ್ ಮಾಡಬೇಕು.
*ಮಾರ್ಕೆಟ್ ನಿರ್ವಹಣೆ ಮಾಡುವವರು ಪ್ರತಿದಿನ ಸ್ವತ್ಛತೆ ಕಾಪಾಡಬೇಕು ಮತ್ತು ಮದ್ಯಪಾನಿಗಳನ್ನು ನಿರ್ಬಂಧಿಸಬೇಕು.

