Dailyhunt Logo
  • Light mode
    Follow system
    Dark mode
    • Play Story
    • App Story
ಸೆ.02ರಂದು ರಾಮಮಂದಿರದ ಸಿಇಒ ಹೆಸರು ಘೋಷಣೆ: ಅಂತಿಮ ರೇಸ್‌ನಲ್ಲಿ 3 ಜನ

ಸೆ.02ರಂದು ರಾಮಮಂದಿರದ ಸಿಇಒ ಹೆಸರು ಘೋಷಣೆ: ಅಂತಿಮ ರೇಸ್‌ನಲ್ಲಿ 3 ಜನ

ಯೋಧ್ಯೆ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಥಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ (ಸಿಇಒ) ಹೆಸರನ್ನು ಬುಧವಾರ ಟ್ರಸ್ಟ್‌ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

ಮೂವರು ನಿವೃತ್ತ ಹಿರಿಯ ಅಧಿಕಾರಿಗಳು ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಒಟ್ಟು 5,500ಕ್ಕೂ ಅಧಿಕ ಅರ್ಜಿಗಳಿಂದ ಆರಂಭವಾದ ಈ ದೀರ್ಘ‌ ಆಯ್ಕೆ ಪ್ರಕ್ರಿಯೆಯಲ್ಲಿ, 3 ಹೆಸರು ಅಂತಿಮಗೊಳಿಸಿ ಟ್ರಸ್ಟ್‌ಗೆ ಸಮಿತಿ ವರದಿ ಸಲ್ಲಿಸಿದೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪ್ರಮೋದ್‌ ಕೊಹ್ಲಿ, ನಿವೃತ್ತ ಲೆ|ಜ| ವಿಷ್ಣುಕಾಂತ್‌, ವಿಜ್ಞಾನಿ ಸುರೇಶ್‌ ಹಾವರೆ ಅವರನ್ನು ಒಳಗೊಂಡ 3 ಸದಸ್ಯರ ಉನ್ನತ ಸಮಿತಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani