ಟಾಪ್ 10 ಸುದ್ದಿ
ಸೇವೆಯ ಜೊತೆ ಪ್ರಾಮಾಣಿಕತೆ ಮೆರೆದ 108 ಆಂಬ್ಯುಲೆನ್ಸ್ ಸಿಬ್ಬಂದಿ

ವಿಜಯಪುರ: ಅಪಘಾತದ ಸಂದರ್ಭದಲ್ಲಿ ಗಾಯಾಳುವನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸುವ ಕರ್ತವ್ಯ ಪ್ರಜ್ಞೆ ಜೊತೆಗೆ 108 ಆಂಬ್ಯುಲೆನ್ಸ್ ಸಿಬ್ಬಂದಿ ಪ್ರಾಮಾಣಿಕತೆಯನ್ನೂ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ.
ಕೊಲ್ಹಾರ ಸಮೀಪದ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಹತ್ತಿರದ ರಾಣಿ ಚನ್ನಮ್ಮ ಶಾಲೆ ಬಳಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಸವಾರ ಸ್ಕಿಡ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.
ಘಟನೆಯಲ್ಲಿ ಕಾಖಂಡಕಿ ಗ್ರಾಮದ ಬಸಲಿಂಗಯ್ಯ ಗುರುಸ್ವಾಮಿ ಎಂಬವರು ತೀವ್ರವಾಗಿ ಗಾಯಗೊಂಡಿದ್ದರು.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ 108 ಅಂಬ್ಯುಲೆನ್ಸ್ ಸ್ಟಾಪ್ ನರ್ಸ ಶಂಕರ ಉಮದಿ ಮತ್ತು ಚಾಲಕ ಕುತ್ಬುದ್ದೀನ್ ಜೈನಾಪುರ ಗಾಯಾಳುವನ್ನು ವಿಜಯಪುರದ ಬಿಎಲ್ ಡಿ ಆಸ್ಪತ್ರೆಗೆ ದಾಖಲಿಸಿದ್ದರು.
FDA ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಪೊಲೀಸ್ ಕಾನ್ಸ್ ಸ್ಟೇಬಲ್ ಸಿಸಿಬಿ ವಶಕ್ಕೆ
ಇದೇ ವೇಳೆ ಅಪಘಾತ ಸಂಭವಿಸಿದ ಸ್ಥಳದಲ್ಲಿ ಬೈಕ್ ಸವಾರನ ಜೇಬಿನಲ್ಲಿ 80 ಸಾವಿರ ರೂ. ನಗದು, ಮೊಬೈಲ್ ಹಾಗೂ ಇತರೆ ವಸ್ತುಗಳಿದ್ದವು. ಅವುಗಳನ್ನು ತಮ್ಮ ವಶಕ್ಕೆ ಪಡೆದ ಅಂಬ್ಯುಲೆನ್ಸ್ ನ ಈ ಇಬ್ಬರು ಸಿಬ್ಬಂದಿ ಆಸ್ಪತ್ರೆಯಲ್ಲಿ ಗಾಯಾಳುವಿನ ಸಂಬಂಧಿಕರಿಗೆ ಹಸ್ತಾಂತರ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.