Dailyhunt Logo
  • Light mode
    Follow system
    Dark mode
    • Play Story
    • App Story
ಶಿವಂ ದುಬೆಗಿಂತ ಮೊದಲು ಹರ್ಷಿತ್‌ ಬ್ಯಾಟಿಂಗ್..!‌ ಗಂಭೀರ್‌ ವಿರುದ್ದ ಗರಂ ಆದ ಕಾರ್ತಿಕ್‌

ಶಿವಂ ದುಬೆಗಿಂತ ಮೊದಲು ಹರ್ಷಿತ್‌ ಬ್ಯಾಟಿಂಗ್..!‌ ಗಂಭೀರ್‌ ವಿರುದ್ದ ಗರಂ ಆದ ಕಾರ್ತಿಕ್‌

ನಾಟಿಂಗ್‌ಹ್ಯಾಂ: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಕುಸಿತ ಕಂಡಿದ್ದು, ಹೀನಾಯ ಸೋಲು ಕಂಡಿದೆ. ಇಂಗ್ಲೆಂಡ್‌ ನೀಡಿದ 202 ರನ್‌ ಗುರಿ ಬೆನ್ನತ್ತಿದ್ದ ಶ್ರೇಯಸ್‌ ಅಯ್ಯರ್‌ ಪಡೆಯು ಕೇವಲ 76 ರನ್‌ ಗೆ ಆಲೌಟಾಗಿದೆ.

ಐರ್ಲೆಂಡ್‌ ವಿರುದ್ಧದ ಎರಡು ಪಂದ್ಯಗಳನ್ನು ಸೋತ ಭಾರತ ತಂಡವು, ಇಂಗ್ಲೆಂಡ್‌ ವಿರುದ್ದದ ಮೊದಲ ಮೂರು ಪಂದ್ಯಗಳಲ್ಲಿ ಎರಡನ್ನು ಸೋತಿದೆ.

ಮೊದಲ ಪಂದ್ಯ ಮಳೆಯ ಕಾರಣದಿಂದ ರದ್ದಾಗಿತ್ತು. ಶ್ರೇಯಸ್‌ ಅಯ್ಯರ್‌ ಅವರು ಭಾರತದ ಟಿ20 ನಾಯಕನಾಗಿ ಇನ್ನೂ ಗೆಲುವು ಕಂಡಿಲ್ಲ.

ಮಂಗಳವಾರ ನಡೆದ ಪಂದ್ಯದ ಬ್ಯಾಟಿಂಗ್‌ ವೇಳೆ ಶಿವಂ ದುಬೆ ಬದಲಿಗೆ ವೇಗಿ ಹರ್ಷಿತ್ ರಾಣಾ ಅವರಿಗೆ ಬಡ್ತಿ ನೀಡಿದ್ದಕ್ಕಾಗಿ ಗೌತಮ್ ಗಂಭೀರ್ ನೇತೃತ್ವದ ತಂಡದ ಆಡಳಿತ ಮಂಡಳಿಯನ್ನು ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಟೀಕಿಸಿದರು. ಐದನೇ ಓವರ್‌ನ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ ಔಟಾದ ನಂತರ, ಭಾರತ ತಂಡವು ಸ್ಕೋರ್ 52/5 ಆಗುವಷ್ಟರಲ್ಲಿ ಹರ್ಷಿತ್ ಅವರನ್ನು ದುಬೆಗಿಂತ ಮುಂದೆ ಕಳುಹಿಸಿತು. ಕಾಮೆಂಟರಿ ಕರ್ತವ್ಯದಲ್ಲಿದ್ದ ದಿನೇಶ್ ಕಾರ್ತಿಕ್ ಈ ನಿರ್ಧಾರದಿಂದ ಗೊಂದಲಕ್ಕೊಳಗಾದರು.‌ ಅಕ್ಕದೆ ದುಬೆ ಮೇಲಿನ ಟೀಂ ಮ್ಯಾನೇಜ್‌ಮೆಂಟ್‌ ನ ನಂಬಿಕೆಯನ್ನು ಪ್ರಶ್ನಿಸಿದರು.

ಇದು ನಿಜವೇ? ಶಿವಂ ದುಬೆಗಿಂತ ಹರ್ಷಿತ್ ರಾಣಾ ಮುಂದಿದ್ದಾರೆಯೇ?" ಎಂದು ದಿನೇಶ್ ಕಾರ್ತಿಕ್‌ ಅವರು ನೇರ ಪ್ರಸಾರದಲ್ಲಿ ಹೇಳುತ್ತಿರುವುದು ಕೇಳಿಬಂತು. ದುಬೆಯನ್ನು ತಡೆಹಿಡಿಯುವ ನಿರ್ಧಾರವನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಕಾರ್ತಿಕ್ ಭಾವಿಸಿದರು.

ದುಬೆ ಅಂತಿಮವಾಗಿ ಒಂದೆರಡು ಓವರ್‌ಗಳ ನಂತರ ಬ್ಯಾಟಿಂಗ್ ಮಾಡಲು ಬಂದರು ಆದರೆ ಪರಿಣಾಮ ಬೀರುವಲ್ಲಿ ವಿಫಲರಾದರು. ನಾಲ್ಕು ಎಸೆತಗಳಲ್ಲಿ ಎರಡು ರನ್ ಗಳಿಸಿ ಜೋಶ್ ಟಾಂಗ್ ಎಸೆತದಲ್ಲಿ ಔಟಾದರು.

"ಈ ಹಂತದಲ್ಲಿ ದುಬೆ ಅವರನ್ನು ಕಳುಹಿಸುವಷ್ಟು ನಂಬಿಕೆ ಅವರಿಗಿಲ್ಲವೇ (ತಂಡದ ಆಡಳಿತ ಮಂಡಳಿ)? ಬದಲಾಗಿ, ಅವರು ಹರ್ಷಿತ್ ರಾಣಾ ಅವರನ್ನು ಮೊದಲೇ ಬಡ್ತಿ ನೀಡಿದ್ದಾರೆ. ಅದು ಸರಿಯಾದ ಮಾರ್ಗವೇ ಎಂದು ನನಗೆ ಖಚಿತವಿಲ್ಲ" ಎಂದು ದಿನೇಶ್ ಹೇಳಿದರು.‌

ಏತನ್ಮಧ್ಯೆ, ಮಂಗಳವಾರ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ವಿರುದ್ಧ 125 ರನ್‌ಗಳಿಂದ ಸೋತ ಭಾರತ, ಟಿ20ಐ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲನ್ನು ಅನುಭವಿಸಿತು.

Dailyhunt
Disclaimer: This content has not been generated, created or edited by Dailyhunt. Publisher: Udayavani