ಶ್ರೀನಗರ: ಭದ್ರತಾ ಪಡೆಗಳಿಗೆ ಬೇಕಾಗಿರುವ ನಾಲ್ವರು ಉಗ್ರರ ಸುಳಿವು ನೀಡುವಂತೆ ಕೋರಿ ಶ್ರೀನಗರದ ಪ್ರಸಿದ್ಧ ಲಾಲ್‌ಚೌಕ್ ಪ್ರದೇಶದಲ್ಲಿ ರವಿವಾರ ಬ್ಯಾನರ್‌ವೊಂದು ಕಾಣಿಸಿಕೊಂಡಿದೆ.
ನಗರದ ಪ್ರತಾಪ್ ಪಾರ್ಕ್‌ನ ಗೋಡೆಯ ಮೇಲೆ ರವಿವಾರ ಬೆಳಗ್ಗೆ ಈ ಫ್ಲೆಕ್ಸ್ ಬ್ಯಾನರ್ ಅನ್ನು ನೇತುಹಾಕಲಾಗಿತ್ತು.
ಈ ವರ್ಷದ ಜುಲೈನಲ್ಲಿ ಅನಂತ್‌ನಾಗ್‌ನಲ್ಲಿ ಪೊಲೀಸ್ ಸಿಬಂದಿಯ ಹತ್ಯೆಯಲ್ಲಿ ಭಾಗಿಯಾಗಿರುವ ಮೊಹಮ್ಮದ್ ಲತೀಫ್ ಭಟ್ ಸೇರಿದಂತೆ ನಾಲ್ವರು ಉಗ್ರರ ಬಗ್ಗೆ ಮಾಹಿತಿ ನೀಡುವಂತೆ ಬ್ಯಾನರ್‌ನಲ್ಲಿ ಮನವಿ ಮಾಡಲಾಗಿದೆ.
ಬಾರಾಮುಲ್ಲಾ ಜಿಲ್ಲೆಯವರಾದ ಬಿಲಾಲ್ ಅಹ್ಮದ್ ಮೀರ್, ಮೊಹಮ್ಮದ್ ಉಮರ್ ಮೀರ್ ಮತ್ತು ಅಬಿದ್ ಖಯೂಮ್ ಲೋನ್ ಉಳಿದ ಮೂವರು ಉಗ್ರರಾಗಿದ್ದಾರೆ. ಈ ನಾಲ್ವರ ಸುಳಿವು ಅಥವಾ ಇರುವಿಕೆಯ ಬಗ್ಗೆ ಮಾಹಿತಿ ನೀಡುವಂತೆ ಬ್ಯಾನರ್‌ನಲ್ಲಿ ಕೋರಲಾಗಿದೆ.

