Dailyhunt
ಸಿಇಒ ನೇಮಕಾತಿಯಿಲ್ಲ: ಟಾಟಾ ಸನ್ಸ್‌ ಸ್ಪಷ್ಟನೆ

ಸಿಇಒ ನೇಮಕಾತಿಯಿಲ್ಲ: ಟಾಟಾ ಸನ್ಸ್‌ ಸ್ಪಷ್ಟನೆ

ನವದೆಹಲಿ: ಟಾಟಾ ಸನ್ಸ್‌ ಸಂಸ್ಥೆಯಲ್ಲಿ ಸಿಇಒ ನೇಮಕ ಮಾಡಿಕೊಳ್ಳಲಾಗುವುದು, ಆಡಳಿತ ವರ್ಗದಲ್ಲಿ ಬದಲಾವಣೆ ತರಲಾಗುವುದು ಎನ್ನುವ ಸುದ್ದಿ ಹರಿದಾಡಿದ್ದರ ಬಗ್ಗೆ ಸಂಸ್ಥೆಯ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಮತ್ತು ಮುಖ್ಯಸ್ಥ ರತನ್ ಟಾಟಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ಆಡಳಿತ ನವೀಕರಣದ ಬಗ್ಗೆ ಯಾವುದೇ ಚರ್ಚೆಯೂ ನಡೆದಿಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

“ಈ ರೀತಿಯ ಸುದ್ದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆಳ ಬೆಳವಣಿಗೆಗೆ ಅಡ್ಡಿ ತರುತ್ತವಷ್ಟೇ. ಈ ರೀತಿ ಸುಳ್ಳು ಸುದ್ದಿ ಹರಿದಾಡಿದ್ದರ ಬಗ್ಗೆ ಬೇಸರವಾಗಿದೆ ’ ಎಂದು ರತನ್‌ ಟಾಟಾ ತಿಳಿಸಿದ್ದಾರೆ.

ಮುಂಬರುವ ಚುನಾವಣೆಗೆ ಬಿಜೆಪಿ ಸಿದ್ದವಾಗಿದೆ : ಕಂದಾಯ ಸಚಿವ ಆರ್ ಅಶೋಕ್

“ಅಂತಹ ನಿರ್ಧಾರಗಳನ್ನು ಸಂಸ್ಥೆಯ ಸಮಿತಿ ತೆಗೆದುಕೊಳ್ಳುತ್ತದೆ. ಈಗ ಆ ರೀತಿಯ ಯಾವುದೇ ಚರ್ಚೆ ನಡೆದಿಲ್ಲ. ಈ ಸುಳ್ಳು ಸುದ್ದಿ ನಮಗೆ ನಿರಾಶೇ ತಂದಿದೆ’ ಎಂದು ಚಂದ್ರಶೇಖರನ್‌ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani