Dailyhunt Logo
  • Light mode
    Follow system
    Dark mode
    • Play Story
    • App Story
ಸ್ನೇಹಿತನ ಮನೆಯಲ್ಲಿ ಚಿನ್ನದ ಸರ ಕಳವು: ಆರೋಪಿ ಬಂಧನ

ಸ್ನೇಹಿತನ ಮನೆಯಲ್ಲಿ ಚಿನ್ನದ ಸರ ಕಳವು: ಆರೋಪಿ ಬಂಧನ

ಬೆಂಗಳೂರು: ಶೂಟಿಂಗ್‌ಗಾಗಿ ಸ್ನೇಹಿತನ ಮನೆಗೆ ಬಂದು ದೇವರ ವಿಗ್ರಹದ ಮೇಲಿದ್ದ ಚಿನ್ನದ ಸರ ಕಳವು ಮಾಡಿದ್ದ ಆರೋಪಿಯನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಮೈಸೂರಿನ ದಟ್ಟಗಳ್ಳಿಯ ಕನಕದಾಸ ನಗರ ನಿವಾಸಿ ಅಭಿಷೇಕ್‌ (22) ಬಂಧಿತ. ಆರೋಪಿ 1.5 ಲಕ್ಷ ರೂ.

ಮೌಲ್ಯದ 8.5 ಗ್ರಾಂನ ಚಿನ್ನದ ಸರ ಕಳವು ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಕೊಡಿಗೇಹಳ್ಳಿಯ ಕೆನರಾ ಬ್ಯಾಂಕ್ ಲೇಔಟ್‌ನಲ್ಲಿ ವಾಸವಿರುವ ದೂರುದಾರರು, ಮನೆಯಲ್ಲಿರುವ ದೇವರ ವಿಗ್ರಹಕ್ಕೆ ಚಿನ್ನದ ಸರ ಹಾಕಿದ್ದರು. ಅದೇ ವೇಳೆ ಪುತ್ರ ತನ್ನ ಸ್ನೇಹಿತರೊಂದಿಗೆ ಮನೆಯಲ್ಲಿ ಕಿರುಚಿತ್ರದ ಶೂಟಿಂಗ್‌ ಇಟ್ಟುಕೊಂಡಿದ್ದ. ಈ ವೇಳೆ ವಿಗ್ರಹದ ಮೇಲಿದ್ದ ಚಿನ್ನದ ಸರ ಕಳ್ಳತನವಾಗಿದೆ. ಹೀಗಾಗಿ ಮನೆ ಕೆಲಸದ ಮಹಿಳೆ ಹಾಗೂ ಪುತ್ರನ ಸ್ನೇಹಿತರ ವಿರುದ್ಧ ದೂರು ನೀಡಿದ್ದರು. ತನಿಖೆ ವೇಳೆ ದೂರುದಾರರ ಪುತ್ರನ ಸ್ನೇಹಿತ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಲಾಗಿದ್ದು, ಖಾಸಗಿ ಫೈನಾನ್ಸ್‌ನಲ್ಲಿ ಅಡಮಾನ ಇರಿಸಿದ್ದ ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಮನೆಯ ಆರ್ಥಿಕ ಸಮಸ್ಯೆ ಸುಧಾರಿಸಲು ಹಾಗೂ ಮೋಜಿನ ಜೀವನಕ್ಕಾಗಿ ಕಳ್ಳತನ ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani