ಮುಂಬೈ: ಶಾಂತಿ ಒಪ್ಪಂದ ಮಾತುಕತೆ ನಿರೀಕ್ಷೆಯ ನಡುವೆಯೇ ಅಮೆರಿಕ, ಇರಾನ್ ನಡುವೆ ಮತ್ತೆ ಸಂಘರ್ಷ ಮುಂದುವರಿದಿರುವುದು ಹಾಗೂ ಕಚ್ಛಾ ತೈಲ ಬೆಲೆ ಏರಿಕೆಯ ಕಳವಳದ ಪರಿಣಾಮ ಬುಧವಾರ (ಜು.08) ಮಧ್ಯಾಹ್ನ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 1,800ಕ್ಕೂ ಅಧಿಕ ಅಂಕಗಳ ಕುಸಿತ ಕಂಡಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ 1875.26 ಅಂಕಗಳ ಕುಸಿತದೊಂದಿಗೆ 76,281.16 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಎನ್ ಎಸ್ ಇ ನಿಫ್ಟಿ ಕೂಡಾ 516.05 ಅಂಕಗಳ ಇಳಿಕೆಯೊಂದಿಗೆ 23,882.65 ಅಂಕಗಳ ಮಟ್ಟಕ್ಕೆ ಕುಸಿದಿದೆ.
ಮಧ್ಯಾಹ್ನದ ವಹಿವಾಟಿನ ವೇಳೆ ಷೇರುಪೇಟೆ ಸಂವೇದಿ ಸೂಚ್ಯಂಕ 493.80 ಅಂಕಗಳಷ್ಟು ಇಳಿಕೆಯೊಂದಿಗೆ 77,686.92 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು. ಎನ್ ಎಸ್ ಇ ನಿಫ್ಟಿ 147.55 ಅಂಕಗಳಷ್ಟು ಕುಸಿತ ಕಂಡಿದ್ದು, 24,251.15 ಅಂಕಗಳ ಮಟ್ಟ ತಲುಪಿತ್ತು.
ಬುಧವಾರದ ಮಧ್ಯಾಹ್ನದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಪರಿಣಾಮ ಹೂಡಿಕೆದಾರರು 2 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸುವಂತಾಗಿದೆ.
ಇಂದಿನ ವಹಿವಾಟಿನಲ್ಲಿ ಒಎನ್ ಜಿಸಿ, ಬಜಾಜ್ ಆಟೋ ಮತ್ತು ವಿಪ್ರೋ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಇಂಡಿಗೋ, ಜಿಯೋ ಫೈನಾನ್ಸ್, ಮಾರುತಿ, ಶ್ರೀರಾಮ್ ಫೈನಾನ್ಸ್, ಟಾಟಾ ಕನ್ಸೂಮರ್, ಬಜಾಜ್, ಮಹೀಂದ್ರ&ಮಹೀಂದ್ರ, ಎಚ್ ಡಿಎಫ್ ಸಿ ಲೈಫ್, ಬಿಇಎಲ್, ಐಟಿಸಿ, ಏಷಿಯನ್ ಪೇಂಟ್ಸ್, ರಿಲಯನ್ಸ್, ಕೋಟಕ್ ಬ್ಯಾಂಕ್ ಷೇರುಗಳು ನಷ್ಟ ಕಂಡಿದೆ.

