ಧಾರವಾಡ: ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗಬೇಕು ಎಂಬುದನ್ನು ಪಕ್ಷವು ಸೂಕ್ತ ಸಮಯದಲ್ಲಿ ತೀರ್ಮಾನ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇದೇ ಭಾನುವಾರ ಪಕ್ಷದ ಕೋರ್ ಕಮಿಟಿ ಸಭೆಯಿದೆ. ಸಭೆಯಲ್ಲಿ ಆ ಬಗ್ಗೆ ಚರ್ಚೆ ಮಾಡುತ್ತೇವೆ.
ವಿ.ಸೋಮಣ್ಣ ಅವರಿಗೆ ರಾಜ್ಯಾಧ್ಯಕ್ಷ ಜವಾಬ್ದಾರಿ ಕೊಡುವ ಕುರಿತು ಯಾವುದೇ ಚರ್ಚೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅದನ್ನು ಹುಟ್ಟು ಹಾಕಿರಬಹುದು. ಅದನ್ನೇ ಕೆಲ ಮಾಧ್ಯಮದವರು ಪಿಕ್‌ಅಪ್ ಮಾಡಿರಬಹುದು. ಇಂತವರನ್ನೇ ಮಾಡಬೇಕು, ತೆಗೆಯಬೇಕು ಎಂದು ಚರ್ಚೆ ಆಗಿಲ್ಲ. ಇನ್ನು ಸದಾನಂದಗೌಡ ಅವರೂ ಕೂಡ ಆಡಿಯೋ ನನ್ನದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದರು.

