Dailyhunt Logo
  • Light mode
    Follow system
    Dark mode
    • Play Story
    • App Story
ಸ್ವಿಟ್ಸರ್ಲೆಂಡ್‌: ರೈಲ್ವೇ ಹಳಿಗಳ ನಡುವೆ ಇದೆ ಸೌರ ಫಲಕಗಳು!

ಸ್ವಿಟ್ಸರ್ಲೆಂಡ್‌: ರೈಲ್ವೇ ಹಳಿಗಳ ನಡುವೆ ಇದೆ ಸೌರ ಫಲಕಗಳು!

"ಸನ್‌ -ವೇಸ್‌' (Sun-Way) ಎಂಬ ಸ್ವಿಸ್‌ ಸ್ಟಾರ್ಟ್‌ಅಪ್‌ ಕಂಪೆನಿಯು ಈ ತಂತ್ರಜ್ಞಾನ ವನ್ನು ಅಭಿವೃದ್ಧಿಪಡಿಸಿದೆ. ಈ ಯೋಜನೆಯಲ್ಲಿ ಸೌರ ಫಲಕಗಳನ್ನು ರೈಲ್ವೇ ಹಳಿಗಳ ಮಧ್ಯ ಖಾಲಿ ಜಾಗದಲ್ಲಿ ಅಳವಡಿಸಲಾಗುತ್ತದೆ. ಇದರಿಂದ ರೈಲುಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

ರೈಲ್ವೇ ಹಳಿಗಳ ನಿರ್ವಹಣೆಯ ಸಮಯದಲ್ಲಿ ಈ ಫಲಕಗಳನ್ನು ಸುಲಭವಾಗಿ ತೆಗೆಯಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿರುವುದು ಇದರ ಪ್ರಮುಖ ಆಕರ್ಷಣೆಯಾಗಿದೆ. ಪ್ರಸ್ತುತ ಈ ತಂತ್ರ ಜ್ಞಾನವನ್ನು ಸ್ವಿಟ್ಸರ್ಲೆಂಡ್‌ನ‌ ಬ್ಯೂಟ್ಸ್‌ ಎಂಬಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

ಇದು ಪರಿಸರ ಸಂರಕ್ಷಣೆಯಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಕೃಷಿ ಜಮೀನು ಅಥವಾ ಕಾಡುಗಳನ್ನು ನಾಶಪಡಿಸದೆ, ಈಗಾಗಲೇ ಇರುವ ಮೂಲಸೌಕರ್ಯವನ್ನು ಬಳಸಿ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದಿಸುವುದು ಈ ಯೋಜನೆಯ ಉದ್ದೇಶ. ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಿದರೆ, ಭವಿಷ್ಯದಲ್ಲಿ ಸ್ವತ್ಛ ಇಂಧನ ಉತ್ಪಾದನೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಲಿದೆ.

ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಹಾಗೂ ಹವಾಮಾನ ಬದಲಾವಣೆಯನ್ನು ಎದುರಿಸಲು ಇದು ಅತ್ಯುತ್ತಮ ಪರಿಹಾರವಾಗಿದೆ. ರೈಲ್ವೇ ಜಾಲಗಳು ಕೇವಲ ಸಾರಿಗೆಗೆ ಸೀಮಿತವಾಗದೆ, ವಿದ್ಯುತ್‌ ಉತ್ಪಾದನ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸ ಬಲ್ಲವೆಂಬುದನ್ನು ಈ ಪ್ರಯೋಗ ಸಾಬೀತುಪಡಿಸಿದೆ. ಒಟ್ಟಾರೆ, ಭವಿಷ್ಯದ ಹಸುರು ಇಂಧನ ಪರಿಕಲ್ಪನೆಗೆ ಇದು ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani