ಮಾಲಿ (ಮಾಲ್ಡೀವ್ಸ್): ಇಲ್ಲಿ ನಡೆಯುತ್ತಿರುವ ಅಂಡರ್ 20 ಸ್ಯಾಫ್ (ಸೌತ್ ಏಷ್ಯನ್ ಫುಟ್ಬಾಲ್ ಫೆಡರೇಶನ್) ಪಂದ್ಯಾವಳಿಯ ಫೈನಲ್‌ನಲ್ಲಿ ಶುಕ್ರವಾರ ಭಾರತ ಮತ್ತು ಬಾಂಗ್ಲಾದೇಶ ಕಣಕ್ಕಿಳಿಯಲಿವೆ.
ಇಲ್ಲಿ ಗೆದ್ದರೆ ಹಾಲಿ ಚಾಂಪಿಯನ್ಸ್ ಭಾರತ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಂತಾಗುತ್ತದೆಯಲ್ಲದೆ, 5ನೇ ಟ್ರೋಫಿಯನ್ನು ಮುಡಿಗೇರಿಸಿಕೊಂಡಂತಾಗಲಿದೆ.
ಬುಧವಾರದ ಸೆಮಿಫೈನಲ್‌ನಲ್ಲಿ ಭೂತಾನ್ ವಿರುದ್ಧ 5 0 ಅಂತರದಿಂದ ಗೆದ್ದು ಭಾರತ ಫೈನಲ್‌ಗೇರಿತ್ತು.

