Dailyhunt Logo
  • Light mode
    Follow system
    Dark mode
    • Play Story
    • App Story
Tamil Nadu: ಕಾವೇರಿ ಕುಸ್ತಿ ನಡುವೆಯೇ ಮೆಟ್ಟೂರು ನೀರು ಬಿಡುಗಡೆ

Tamil Nadu: ಕಾವೇರಿ ಕುಸ್ತಿ ನಡುವೆಯೇ ಮೆಟ್ಟೂರು ನೀರು ಬಿಡುಗಡೆ

ಮೆಟ್ಟೂರು: ಕಾವೇರಿ ವಿವಾದದ ಮಧ್ಯೆಯೇ ತಮಿಳುನಾಡು ಸಿಎಂ ವಿಜಯ್‌ ಮಂಗಳವಾರ ಮೆಟ್ಟೂರು ಅಣೆಕಟ್ಟೆಯಿಂದ ಸಾಂಬಾ ಕೃಷಿಗೆ ನೀರು ಬಿಡುಗಡೆಗೆ ಚಾಲನೆ ನೀಡಿದರು.

ಸಾಮಾನ್ಯವಾಗಿ ಜೂ.12ಕ್ಕೆ ಮೆಟ್ಟೂರು ಡ್ಯಾಂನಿಂದ ಕಾವೇರಿ ಮುಖಜ ಭೂಮಿಗೆ 230 ದಿನ ನೀರು ಹರಿಸಲಾಗುತ್ತದೆ.

ಜ.28ರಂದು ನಿಲ್ಲಿಸಲಾಗುತ್ತದೆ. ಆದರೆ, ಈ ಬಾರಿ ಮಳೆ ಕೊರತೆ ಕಾರಣ 80 ದಿನ ವಿಳಂಬದ ನಂತರ ಕೃಷಿಗೆ ನೀರು ಹರಿಸಲಾಗಿದೆ.

ಮೆಟ್ಟೂರು ಡ್ಯಾಂನಿಂದ ಈವರೆಗೆ 62 ಬಾರಿ ನೀರು ಹರಿಸಲಾಗಿದ್ದು ಸೆಪ್ಟಂಬರ್‌ನಲ್ಲಿ ನೀರು ಬಿಟ್ಟಿರುವುದು ಡ್ಯಾಮ್‌ ಇತಿಹಾಸದಲ್ಲೇ 4ನೇ ಬಾರಿ. ಮಂಗಳವಾರ ಮುಂಜಾನೆ ಡ್ಯಾಂನಲ್ಲಿ 91.56 ಅಡಿ (120 ಅಡಿ ಒಟ್ಟು ಎತ್ತರ) ನೀರಿದ್ದು 54.45 ಟಿಎಂಸಿ (93.47 ಟಿಎಂಸಿ ಪೂರ್ಣ ಸಾಮರ್ಥ್ಯ) ನೀರು ಸಂಗ್ರಹವಾಗಿದೆ. 10,857 ಕ್ಯುಸೆಕ್‌ ನಷ್ಟು ಒಳಹರಿವಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani