Dailyhunt Logo
  • Light mode
    Follow system
    Dark mode
    • Play Story
    • App Story
Tarihal: ಹೆಲ್ಮೆಟ್‌ನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ ಪತಿ!

Tarihal: ಹೆಲ್ಮೆಟ್‌ನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ ಪತಿ!

ಹುಬ್ಬಳ್ಳಿ: ಕ್ಷುಲ್ಲಕ ವಿಷಯವಾಗಿ ನವದಂಪತಿ ನಡುವೆ ಜಗಳವಾಗಿ ವಿಕೋಪಕ್ಕೆ ಹೋಗಿ ಪತಿಯು ಸಿಟ್ಟಿನಿಂದ ಪತ್ನಿಗೆ ಹೆಲ್ಮೆಟ್‌ನಿಂದ ಮನಬಂದಂತೆ ಹೊಡೆದು ಕೊಲೆಗೈದ ಘಟನೆ ಬುಧವಾರ (ಜು.08) ಬೆಳಗ್ಗೆ ತಾರಿಹಾಳದ ಗಣೇಶ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ನವವಿವಾಹಿತೆ ನಾಗರತ್ನಾ ಹಳೆಮನಿ‌ (19) ಮೃತಪಟ್ಟಿದ್ದು, ಪತಿ ಶಿವರಾಜ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ

ಫೆಬ್ರವರಿಯಲ್ಲಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ದಂಪತಿ ನಡುವೆ ಬೆಳಗ್ಗೆ ಜಗಳ ನಡೆದಿದೆ. ಆಗ ಶಿವರಾಜನು ಕೋಪಗೊಂಡು ಹೆಲ್ಮೆಟ್‌ನಿಂದ ಮನಬಂದಂತೆ ತಲೆಗೆ ಹೊಡೆದ ಪರಿಣಾಮ ನಾಗರತ್ನಾ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ.

ನಾಗರತ್ನಾ ನವಲಗುಂದ ತಾಲೂಕ ಇಬ್ರಾಹಿಂಪುರ ಗ್ರಾಮದವರಾಗಿದ್ದು, ಕೊಲೆಗೆ ನಿಜವಾದ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani