Dailyhunt Logo
  • Light mode
    Follow system
    Dark mode
    • Play Story
    • App Story
ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್;‌ ಕಪಿಲ್‌ ದಾಖಲೆ ಸಂಕಷ್ಟದಲ್ಲಿ

ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಮಿಚೆಲ್‌ ಸ್ಟಾರ್ಕ್;‌ ಕಪಿಲ್‌ ದಾಖಲೆ ಸಂಕಷ್ಟದಲ್ಲಿ

ಡಾರ್ವಿನ್:‌ ಗುರುವಾರ (ಆಗಸ್ಟ್‌ 13) ಅಂತಾರಾಷ್ಟ್ರೀಯ ಎಡಗೈದಾರರ ದಿನ (International Left-Handers Day). ಇದೇ ದಿನದಂದು ಆಸ್ಟ್ರೇಲಿಯಾದ ಎಡಗೈ ಬೌಲರ್‌ ಮಿಚೆಲ್‌ ಸ್ಟಾರ್ಕ್‌ ದಾಖಲೆಯೊಂದನ್ನು ಬರೆದಿದ್ದಾರೆ.

ಡಾರ್ವಿನ್‌ ನಲ್ಲಿ ಬಾಂಗ್ಲಾದೇಶದ ವಿರುದ್ದ ನಡೆಯುತ್ತಿರುವ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಮಿಚೆಲ್‌ ಸ್ಟಾರ್ಕ್‌ ದಾಖಲೆ ಬರೆದಿದ್ದಾರೆ.

ಬಾಂಗ್ಲಾ ಆರಂಭಿಕ ಬ್ಯಾಟರ್‌ ಶದ್ಮಾನ್‌ ಇಸ್ಲಾಂ ವಿಕೆಟ್‌ ಪಡೆದ ಮಿಚೆಲ್‌ ಸ್ಟಾರ್ಕ್‌, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎಡಗೈ ಬೌಲರ್‌ ಎಂಬ ಸಾಧನೆ ಮಾಡಿದ್ದಾರೆ.

ಶದ್ಮಾನ್‌ ಇಸ್ಲಾಂ ವಿಕೆಟ್‌ ಮೂಲಕ ಸ್ಟಾರ್ಕ್‌ ಅವರ ವಿಕೆಟ್‌ ಗಳ ಸಂಖ್ಯೆ 434ಕ್ಕೆ ಏರಿಕೆಯಾಗಿದೆ. ಈ ಮೂಲಕ 433 ವಿಕೆಟ್‌ ಪಡೆದಿದ್ದ ಲಂಕಾದ ಮಾಜಿ ಬೌಲರ್‌ ರಂಗನಾ ಹೆರಾತ್‌ ದಾಖಲೆ ಮುರಿದರು.

ಭಾರತದ ಪರ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ ಪಡೆದ ಎಡಗೈ ಬೌಲರ್‌ ಎಂದರೆ ರವೀಂದ್ರ ಜಡೇಜಾ ಅವರು. ಜಡೇಜಾ ಇದುವರೆಗೆ 348 ವಿಕೆಟ್‌ ಪಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಎಡಗೈ ಬೌಲರ್‌ಗಳು

434* - ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)

433 - ರಂಗನ ಹೆರಾತ್ (ಶ್ರೀಲಂಕಾ)

414 - ವಾಸಿಮ್ ಅಕ್ರಮ್ (ಪಾಕಿಸ್ತಾನ)

362 - ಡೇನಿಯಲ್ ವೆಟ್ಟೋರಿ (ನ್ಯೂಜಿಲ್ಯಾಂಡ್)

355 - ಚಾಮಿಂಡಾ ವಾಸ್ (ಶ್ರೀಲಂಕಾ)

348 - ರವೀಂದ್ರ ಜಡೇಜ (ಭಾರತ)

ಕಪಿಲ್‌ ದಾಖಲೆ ಸಂಕಷ್ಟದಲ್ಲಿ

1978 ರಿಂದ 1994 ರವರೆಗೆ 131 ಪಂದ್ಯಗಳಲ್ಲಿ 434 ವಿಕೆಟ್ ಪಡೆದ ಭಾರತದ ದಂತಕಥೆ ಕಪಿಲ್ ದೇವ್ ಅವರೊಂದಿಗೆ ಸ್ಟಾರ್ಕ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಂಟಿ 11 ನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರ 10 ಸ್ಥಾನ ಪಡೆಯಲು ಎಡಗೈ ವೇಗಿ ಈಗ ಆರು ವಿಕೆಟ್‌ಗಳ ಅಗತ್ಯವಿದೆ. ಪ್ರಸ್ತುತ, ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ದಂತಕಥೆ ಡೇಲ್ ಸ್ಟೇನ್ 93 ಟೆಸ್ಟ್‌ಗಳಿಂದ 439 ವಿಕೆಟ್‌ಗಳೊಂದಿಗೆ ಸಾರ್ವಕಾಲಿಕ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani