Dailyhunt Logo
  • Light mode
    Follow system
    Dark mode
    • Play Story
    • App Story
Thane: ವೈದ್ಯೆ ಮೇಲೆ ಹಲ್ಲೆ ಪ್ರಕರಣ: ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಬಂಧನ

Thane: ವೈದ್ಯೆ ಮೇಲೆ ಹಲ್ಲೆ ಪ್ರಕರಣ: ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಬಂಧನ

ಮುಂಬೈ: ಸರ್ಕಾರಿ ಆಸ್ಪತ್ರೆಯ ವೈದ್ಯೆ ಮತ್ತು ವೈದ್ಯಕೀಯ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಅವರನ್ನು ಪೊಲೀಸರು ಬುಧವಾರ (ಜು.8) ಬಂಧಿಸಿದ್ದಾರೆ.

ಜುಲೈ 6 ರ ಸಂಜೆ ಈ ಘಟನೆ ನಡೆದಿದ್ದು, ಮಂಗಳವಾರ ರಾತ್ರಿ ಮ್ಹಾತ್ರೆ ಮತ್ತು ಇತರ ಐವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅದರಂತೆ ಬುಧವಾರ ಪೊಲೀಸರು ಮ್ಹಾತ್ರೆ ಅವರನ್ನು ಅವರ ನಿವಾಸದಲ್ಲಿ ವಶಕ್ಕೆ ಪಡೆದಿದ್ದಾರೆ.

ಆಸ್ಪತ್ರೆಯ ಮೂಲಗಳ ಪ್ರಕಾರ, ಆಸ್ಪತ್ರೆಯ ಎನ್‌ಐಸಿಯು (NICU) ಭರ್ತಿಯಾಗಿದ್ದರಿಂದ, ಮಗುವಿನ ಸುರಕ್ಷತೆಯ ದೃಷ್ಟಿಯಿಂದ ನವಜಾತ ಶಿಶುವೊಂದನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯರಾದ ಸೃಷ್ಟಿ ಬಾವಿಸ್ಕರ್ ಮತ್ತು ವೈಭವ್ ಸಾಳುಂಖೆ ಮಗುವಿನ ಪೋಷಕರಿಗೆ ಸೂಚಿಸಿದ್ದರು. ಇದರಿಂದ ಅಸಮಾಧಾನಗೊಂಡ ಸಂಬಂಧಿಕರು ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಅವರಿಗೆ ಕರೆ ಮಾಡಿದ್ದಾರೆ.

ಮ್ಹಾತ್ರೆ ತಮ್ಮ ಬೆಂಬಲಿಗರೊಂದಿಗೆ ಆಸ್ಪತ್ರೆಗೆ ಧಾವಿಸಿ ಗದ್ದಲ ಸೃಷ್ಟಿಸಿದ್ದಾರೆ. ಮೊಬೈಲ್ ಹಿಡಿದು ನಿಂತಿದ್ದ ಮಹಿಳಾ ವೈದ್ಯರೊಬ್ಬರ ಮೇಲೆ ಮ್ಹಾತ್ರೆ ಕೈಯಿಂದ ಜೋರಾಗಿ ಹಲ್ಲೆ ನಡೆಸಿದ್ದು, ಅವರ ಕೈಲಿದ್ದ ಫೋನ್ ಕೆಳಗೆ ಬಿದ್ದಿದೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani