Dailyhunt Logo
  • Light mode
    Follow system
    Dark mode
    • Play Story
    • App Story
Thirthahalli: ರಾಮನಸರ ಕ್ಷೇತ್ರದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ

Thirthahalli: ರಾಮನಸರ ಕ್ಷೇತ್ರದಲ್ಲಿ ನಾಗರ ಪಂಚಮಿ ವಿಶೇಷ ಪೂಜೆ

ತೀರ್ಥಹಳ್ಳಿ: ಹುಂಚದಕಟ್ಟೆ ಗ್ರಾಮ ಸಮೀಪದ ರಾಮನಸರ ಶ್ರೀ ನಾಗದೇವತೆ ಚೌಡೇಶ್ವರಿ ದೇವಸ್ಥಾನ ಸನ್ನಿಧಿಯಲ್ಲಿ ನಾಗರ ಪಂಚಮಿ ಅಂಗವಾಗಿ ವಿಶೇಷ ಪೂಜೆ ವಿಧಿ ವಿಧಾನಗಳು ನೆರವೇರಿದವು.

ನಾಗರ ಪಂಚಮಿ ಅಂಗವಾಗಿ ದೇವರ ಮೂರ್ತಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.

ದೇವಾಲಯದ ನಿತ್ಯ ಅರ್ಚಕರಾದ ಸುರೇಶ್ ಭಟ್ ತಂಡದವರಿಂದ ಪೂಜಾ ವಿಧಿ ವಿಧಾನಗಳು ನೆರವೇರಿದವು.

ದೇವಸ್ಥಾನ ಆಡಳಿತ ಮಂಡಳಿಯ ಸುನಂದಮ್ಮ, ನಾಗರಾಜ್, ಪಾತ್ರೀ ಚಂದ್ರಶೇಖರ್ (ಪುಟ್ಟಣ್ಣ), ದೇವಸ್ಥಾನ ಸಿಬ್ಬಂದಿಗಳು ಹಾಗೂ ನೂರಾರು ಭಕ್ತರು ನೆರೆದಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani