ತೀರ್ಥಹಳ್ಳಿ: ಹಂದಿ ಶಿಕಾರಿ ಮಾಡಲು ಇಟ್ಟಿದ್ದ ವಸ್ತು ಸಿಡಿದು ಮಹಿಳೆಯೊಬ್ಬರ ಕೈ ಐದು ಬೆರಳುಗಳು ಸಂಪೂರ್ಣ ತುಂಡಾಗಿರುವ ಘಟನೆ ನೆಂಟೂರಿನಲ್ಲಿ ನಡೆದಿದೆ.
ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಪಂ ವ್ಯಾಪ್ತಿಯ ನೆಂಟೂರಿನ ಕಮಲಮ್ಮ (72 ) ಗಾಯಗೊಂಡ ಮಹಿಳೆ. ತೋಟದಲ್ಲಿ ಹಂದಿ ಶಿಕಾರಿ ಮಾಡಲು ಗೋಟು ಅಡಿಕೆ ಒಳಗೆ ಕಚ್ಚಾ ಬಾಂ*ಬ್ ಇಡಲಾಗಿತ್ತು.
ಅದನ್ನು ನಾಯಿ ಕಚ್ಚಿಕೊಂಡು ಮನೆಯ ಅಂಗಳಕ್ಕೆ ತಂದಿದೆ. ಅದನ್ನು ಕಮಲಮ್ಮ ಮುಟ್ಟಿದಾಗ ಏಕಾಏಕಿ ಸಿಡಿದಿದ್ದು ಕೈನ ಐದು ಬೆರಳುಗಳು ತುಂಡಾಗಿವೆ. ಕಾಲಿಗೆ ಗಾಯವಾಗಿದೆ. ಆಗುಂಬೆ ಠಾಣೆ ಪಿಎಸ್ ಐ ಶಿವನಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.

