ಬೆಂಗಳೂರು: ಟಿವಿಎಸ್ ವೇಣು ಸಮೂಹದ ಅಂಗ ಸಂಸ್ಥೆಯಾದ ಟಿವಿಎಸ್ ಮೋಟಾರ್ ಕಂಪನಿಯು, ತನ್ನ ಟಿವಿಎಸ್ ಎನ್‌ಟಾರ್ಕ್ 125 ಡಿಸ್ಕ್ ಮತ್ತು ರೇಸ್ ಎಡಿಷನ್ ಆವೃತ್ತಿಗಳಲ್ಲಿ ಹೊಸ ಬಣ್ಣ ಹಾಗೂ ಗ್ರಾಫಿಕ್ಸ್ ವಿನ್ಯಾಸಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಟಿವಿಎಸ್ ಎನ್‌ಟಾರ್ಕ್ 150 ಹಾಗೂ ಟಿವಿಎಸ್ ಎನ್‌ಟಾರ್ಕ್ ರೇಸ್ ಎಕ್ಸ್ ಪಿ ಆವೃತ್ತಿಗಳ ನಂತರ ಕಂಪನಿಯು ಈ ನಿರ್ಧಾರ ಕೈಗೊಂಡಿದೆ.
ಮುಂಬರುವ ಹಬ್ಬದ ದಿನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡಲಾಗಿದೆ.
ಟಿವಿಎಸ್ ಎನ್‌ಟಾರ್ಕ್ 125 ರೇಸ್ ಎಡಿಷನ್ ಇನ್ನು ಮುಂದೆ ಡ್ರಿಫ್ಟ್ ಬ್ಲೂ, ಇನ್ಫರ್ನೋ ರೆಡ್ ಮತ್ತು ರಶ್ ಗ್ರೀನ್ ಎಂಬ ಮೂರು ಬಣ್ಣಗಳ ಸಂಯೋಜನೆಯಲ್ಲಿ ಲಭ್ಯವಿರಲಿದೆ. ಇದಕ್ಕೆ ಪೂರಕವಾಗಿ ಬಣ್ಣದ ಅಲಾಯ್ ವೀಲ್ ಗಳನ್ನು ನೀಡಲಾಗಿದೆ.
ಟಿವಿಎಸ್ ರೇಸಿಂಗ್‌ನಿಂದ ಸ್ಫೂರ್ತಿ ಪಡೆದು ಈ ಹೊಸ ಬಣ್ಣಗಳನ್ನು ವಿನ್ಯಾಸಗೊಳಿಸಲಾಗಿದೆ. ಯುವ ಸವಾರರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಗ್ರಾಫಿಕ್ಸ್ ಅನ್ನು ರೂಪಿಸಲಾಗಿದೆ.
ಇದೇ ವೇಳೆ, ಟಿವಿಎಸ್ ಎನ್ ಟಾರ್ಕ್ 125 ಡಿಸ್ಕ್ ಆವೃತ್ತಿಯಲ್ಲಿ ಮಿಡ್‌ನೈಟ್ ಬ್ಲಾಕ್ ಮತ್ತು ಸ್ಪಿಟಿ ವೈಟ್ ಎಂಬ ಎರಡು ಹೊಸ ಬಣ್ಣಗಳನ್ನು ಪರಿಚಯಿಸಲಾಗಿದೆ. ಇದರೊಂದಿಗೆ, ಈಗಾಗಲೇ ಮಾರುಕಟ್ಟೆಯಲ್ಲಿರುವ ನಾರ್ಡೊ ಗ್ರೇ ಬಣ್ಣದ ಸ್ಕೂಟರ್ ಗೆ ಈಗ ಹೊಸ ಗ್ರಾಫಿಕ್ಸ್ ವಿನ್ಯಾಸವನ್ನು ನೀಡಲಾಗಿದೆ.
ಈ ಸ್ಕೂಟರ್, ಟಿವಿಎಸ್ ಸ್ಮಾರ್ಟ್ ಎಕ್ಸ್ ಕನೆಕ್ಟ್ ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಡಿಜಿಟಲ್ ಆರ್‌ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಒಳಗೊಂಡಿದೆ. ಈ ವೈಶಿಷ್ಟ್ಯವನ್ನು ಈಗ ಎಲ್ಲಾ ಟಿವಿಎಸ್ ಎನ್ ಟಾರ್ಕ್ ಆವೃತ್ತಿಗಳಲ್ಲಿ ಕಡ್ಡಾಯವಾಗಿ ನೀಡಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ (2026) ನಡೆಯುತ್ತಿರುವ ವಿಶ್ವಕಪ್ ಫುಟ್ ಬಾಲ್ ಪಂದ್ಯಾವಳಿಗಾಗಿ ಟಿವಿಎಸ್ ಎನ್‌ಟಾರ್ಕ್ ಸಂಸ್ಥೆಯು ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್ ಜೊತೆಗೆ ಅಧಿಕೃತ ಪಾಲುದಾರಿಕೆಯನ್ನು ಮಾಡಿಕೊಂಡಿದೆ.
ಹೊಸ ಬಣ್ಣ ಹಾಗೂ ವಿನ್ಯಾಸದೊಂದಿಗೆ ಬಂದಿರುವ ಟಿವಿಎಸ್ ಎನ್ ಟಾರ್ಕ್ 125 ಡಿಸ್ಕ್ ಆವೃತ್ತಿಯ ಆರಂಭಿಕ ಬೆಲೆ ₹ 82,500 ಹಾಗೂ ರೇಸ್ ಎಡಿಷನ್ ಆವೃತ್ತಿಯ ಬೆಲೆ ₹ 87,950 (ದೆಹಲಿ ಎಕ್ಸ್ ಶೋರೂಂ) ಇರಲಿದೆ. ಈ ಸ್ಕೂಟರ್ ಗಳು ದೇಶಾದ್ಯಂತ ಇರುವ ಎಲ್ಲಾ ಟಿವಿಎಸ್ ಮೋಟಾರ್ ಡೀಲರ್ ಶಿಪ್ ಗಳಲ್ಲಿ ಲಭ್ಯವಿರಲಿವೆ.

