Dailyhunt Logo
  • Light mode
    Follow system
    Dark mode
    • Play Story
    • App Story
TOSS Movie: ಮಾಸ್ ಆಕ್ಷನ್‌ ಟೀಸರ್‌ನಲ್ಲಿ ಮಿಂಚಿದ ಅರ್ಜುನ್‌-ಗರುಡ ರಾಮ್-‌ ಬಾಲಾಜಿ ಮನೋಹರ್‌

TOSS Movie: ಮಾಸ್ ಆಕ್ಷನ್‌ ಟೀಸರ್‌ನಲ್ಲಿ ಮಿಂಚಿದ ಅರ್ಜುನ್‌-ಗರುಡ ರಾಮ್-‌ ಬಾಲಾಜಿ ಮನೋಹರ್‌

ಣಿಪಾಲ: ನಟ - ನಿರ್ದೇಶಕ ಅರ್ಜುನ್‌ ದೇವ್‌ ಅವರ ಬಹುನಿರೀಕ್ಷಿತ ʼಟಾಸ್‌ʼ (Toss) ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ಮಾಸ್‌ ಆಕ್ಷನ್‌ ಹೊಂದಿರುವ ʼಟಾಸ್‌ʼ ಟೀಸರ್‌ ಸಿನಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ.

"ನಿನಗೆ ಮೂಗಿನ ತುದಿಯಲ್ಲೇ ಕೋಪ ಅಂತೆ.." ಎಂದು ಆರಂಭವಾಗುವ ಟೀಸರ್‌ ನಲ್ಲಿ ಅರ್ಜುನ್‌ ಆಂಗ್ರಿ ಯಂಗ್‌ ಮ್ಯಾನ್‌ ಆಗಿ ಮಿಂಚಿದ್ದಾರೆ.

ಕೆಜಿಎಫ್‌ ಖ್ಯಾತಿಯ ಗರುಡ ರಾಮ್‌, ನಟ ಬಾಲಾಜಿ ಮನೋಹರ್‌ ಅವರು ಸಿನಿಮಾದ ಹೈಲೈಟ್ಸ್.‌

ಬಹು ಭಾಷೆಗಳಲ್ಲಿ ನಿರ್ಮಾಣವಾಗಿರುವ ʼಟಾಸ್‌ʼ ಚಿತ್ರವು ತುಳು ಮತ್ತು ಕನ್ನಡ ಭಾಷೆಗಳಲ್ಲಿ ಸೆ.18ರಂದು ಏಕಕಾಲದಲ್ಲಿ ರಿಲೀಸ್‌ ಆಗಲಿದೆ. ಅರ್ಜುನ್‌ ದೇವ್‌ ಅವರು ಆಕ್ಷನ್‌ ಕಟ್‌ ಹೇಳಿರುವ ʼಟಾಸ್‌ʼ ಚಿತ್ರಕ್ಕೆ ಡಾ.ದೇವದಾಸ್‌ ಕಾಪಿಕಾಡ್‌ ಅವರು ಕಥೆ-ಚಿತ್ರಕಥೆ ಬರೆದಿದ್ದಾರೆ.

ಚಿತ್ರದಲ್ಲಿ ಅರ್ಜುನ್‌ ದೇವ್‌ ಮತ್ತು ಸುತೇಜ್‌ ಶೆಟ್ಟಿ ನಾಯಕ- ನಾಯಕಿಯಾಗಿ ನಟಿಸಿದ್ದಾರೆ. ಕೃತಿ ಶೆಟ್ಟಿ ನಾಯಕನ ತಾಯಿ ಪಾತ್ರ ಮಾಡಿದ್ದಾರೆ. ಉಳಿದಂತೆ ನವೀನ್‌ ಡಿ ಪಡೀಲ್‌, ಸ್ವರಾಜ್‌ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪಿ&ವೈ ವರ್ಲ್ಡ್ ಟೂರ್ ಎಲ್‌ಎಲ್‌ಪಿ ಬ್ಯಾನರ್‌ ನಲ್ಲಿ ಸಾಗರ್ ಪೂಜಾರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸು ಫ್ರಮ್‌ ಸೋ ಖ್ಯಾತಿಯಾ ಶನೀಲ್‌ ಗೌತಮ್‌ ಈ ಚಿತ್ರಕ್ಕೆ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡಿದ್ದಾರೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಕನ್ನಡ ಮತ್ತು ತುಳು ಭಾಷೆಯಲ್ಲಿ ಈ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ʼಟಾಸ್‌ʼ ಚಿತ್ರ ವೀಕ್ಷಿಸಿ ಮೆಚ್ಚಿಕೊಂಡ ಗೋಲ್ಡನ್‌ಸ್ಟಾರ್‌ ಗಣೇಶ್‌ ಮತ್ತು ಶಿಲ್ಪಾ ಗಣೇಶ್‌ ದಂಪತಿ ಈ ಚಿತ್ರವನ್ನ ಗೋಲ್ಡನ್‌ ಮೂವೀಸ್‌ ಬ್ಯಾನರ್‌ಮೂಲಕ ಅರ್ಪಿಸುತ್ತಿದ್ದಾರೆ.

ಮಣಿಕಾಂತ್‌ ಕದ್ರಿ ಅವರ ಸಂಗೀತ ಸಂಯೋಜನೆ, ಜೋಯೆಲ್‌ ಶರ್ಮನ್‌ ಡಿಸೋಜಾ ಅವರ ಛಾಯಾಗ್ರಹಣ, ಯಾಶ್ವಿ‌ನ್‌ ಕೆ.ಶೆಟ್ಟಿಗಾರ್‌ ಅವರ ಸಂಕಲನ ʼಟಾಸ್‌ʼ ಚಿತ್ರಕ್ಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani