Dailyhunt Logo
  • Light mode
    Follow system
    Dark mode
    • Play Story
    • App Story
Tulu Movie: ಸೆಂಚುರಿ ಬಾರಿಸುವತ್ತ ಗಜಾನನ ಕ್ರಿಕೆಟರ್ಸ್‌

Tulu Movie: ಸೆಂಚುರಿ ಬಾರಿಸುವತ್ತ ಗಜಾನನ ಕ್ರಿಕೆಟರ್ಸ್‌

ಣಿಪಾಲ: ಕಳೆದ ಮೇ ತಿಂಗಳಲ್ಲಿ ರಿಲೀಸ್‌ ಆಗಿ ತುಳು ಪ್ರೇಕ್ಷಕರ ಮನ ಗೆದ್ದ ಗಜಾನನ ಕ್ರಿಕೆಟರ್ಸ್‌ (Gajanana Cricketers) ಸಿನಿಮಾ ಇದೀಗ ಶತ ದಿನ ಆಚರಿಸಿಕೊಳ್ಳುತ್ತಿದೆ. ಕ್ರಿಕೆಟ್‌ - ಲವ್‌ ಸ್ಟೋರಿ - ಕಾಮಿಡಿ ಹೀಗೆ ಕಂಪ್ಲೀಟ್‌ ಪ್ಯಾಕೇಜ್‌ ಜೊತೆಗೆ ಬಂದಿದ್ದ ಗಜಾನನ ಕ್ರಿಕೆಟರ್ಸ್‌ ಶತಕ ಬಾರಿಸಿ ಮಿಂಚುತ್ತಿದೆ.

ನಟ ವಿನೀತ್‌ ಕುಮಾರ್‌ ಅವರ ಮತ್ತೊಂದು ಸಿನಿಮಾ ಸೆಂಚುರಿ ಬಾರಿಸಿದೆ. ಈ ಹಿಂದೆ ʼರಾಜ್‌ ಸೌಂಡ್ಸ್‌ ಆಂಡ್‌ ಲೈಟ್ಸ್‌ʼ ಮತ್ತು ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼ ಸಿನಿಮಾಗಳಲ್ಲೂ ವಿನೀತ್‌ ಶತದಿನದ ಕೇಕ್‌ ಕಟ್‌ ಮಾಡಿದ್ದರು. ಇದೀಗ ಗಜಾನನ ಕ್ರಿಕೆಟರ್ಸ್‌ ಕೂಡಾ ಕೈ ಹಿಡಿದಿದ್ದು, ವಿನೀತ್‌ ಕುಮಾರ್‌ ಅವರನ್ನು ತುಳು ಸಿನಿ ರಂಗದ ಭರವಸೆ ನಾಯಕರನ್ನಾಗಿ ಮಾಡಿದೆ.

ಕೀರ್ತನ್‌ ಭಂಡಾರಿ ಆಕ್ಷನ್‌ ಕಟ್‌ ಹೇಳಿದ್ದ ಗಜಾನನ ಕ್ರಿಕೆಟರ್ಸ್‌ ಸಿನಿಮಾದಲ್ಲಿ ವಿನೀತ್‌ ಕುಮಾರ್‌ ಜೊತೆಗೆ ಸಮತಾ ಅಮೀನ್‌, ಅನ್ವಿತಾ ಸಾಗರ್‌, ನವೀನ್‌ ಡಿ ಪಡೀಲ್‌, ಅವರಿಂದ ಬೋಳಾರ್‌ ಮುಂತಾದವರು ನಟಿಸಿದ್ದಾರೆ. ಪ್ರಜ್ವಲ್ ಫಿಲಂಸ್ ಲಾಂಛನದಲ್ಲಿ ಪ್ರಜ್ವಲ್ ಶೆಟ್ಟಿ ನಿರ್ಮಾಣ ಮಾಡಿದ್ದರು. ಇದೀಗ ಶತ ದಿನದ ಸಂಭ್ರಮದೊಂದಿಗೆ ನಿರ್ಮಾಪಕರ ಮುಖದಲ್ಲೂ ನಗು ತಂದಿದೆ.


ʼದೇವೆರೆಕಂಡ ಟ್ರೋಫಿʼಗಾಗಿ ಎರಡು ಊರು - ತಂಡಗಳ ನಡುವಿನ ಕ್ರಿಕೆಟ್‌ ಪ್ರತಿಷ್ಠೆಯ ಸುತ್ತ ಸಾಗುವ ಕಥೆಯನ್ನು ತುಳುನಾಡ ಜನ ಇಷ್ಟಪಟ್ಟಿದ್ದರು. ಭರ್ಜರಿ ಆರಂಭ ಪಡೆದಿದ್ದ ಸಿನಿಮಾ ಮಂಗಳೂರು, ಉಡುಪಿ, ಕಾರ್ಕಳ ಸೇರಿ ಕರಾವಳಿಯಲ್ಲಿ ಭಾರೀ ಜನಪ್ರಿಯತೆ ಪಡೆದಿತ್ತು.

ಆ.29ರಂದು ಗಜಾನನ ಕ್ರಿಕೆಟರ್ಸ್‌ ನೂರನೇ ದಿನದ ಪ್ರದರ್ಶನ ಕಾಣಲಿದೆ. ಸುರತ್ಕಲ್‌ ನ ಸಿನಿ ಗ್ಯಾಲಕ್ಸಿಯಲ್ಲಿ ಶತ ದಿನದ ಸಂಭ್ರಮವನ್ನು ಚಿತ್ರತಂಡ ಹಮ್ಮಿಕೊಂಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani