ನವದೆಹಲಿ: ಪರಾರಿಯಾಗಿದ್ದ ಮಾದಕವಸ್ತು ಕಳ್ಳಸಾಗಣೆ ಜಾಲದ ಕಿಂಗ್ ಪಿನ್ ವೀರೇಂದ್ರ ಸಿಂಗ್ ಬಸೋಯಾನನ್ನು ಮಾದಕವಸ್ತು ನಿಯಂತ್ರಣ ಬ್ಯೂರೋ (ಎನ್ ಸಿಬಿ) ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ(ಆ.14) 'ಎಕ್ಸ್' ನಲ್ಲಿ ಪೋಸ್ಟ್ ಮಾಡಿ ಈ ಮಾಹಿತಿಯನ್ನು ಘೋಷಿಸಿದ್ದು, ಮಾದಕ ವಸ್ತುಗಳ ವಿರುದ್ಧ ಕೇಂದ್ರ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯಲ್ಲಿ ಇದು ಹೊಸ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
ಎನ್‌ಸಿಬಿಯ ಪ್ರಯತ್ನಗಳನ್ನು ಶ್ಲಾಘಿಸಿದ ಸಚಿವ ಅಮಿತ್ ಶಾ, ಮಾದಕವಸ್ತು ಕಳ್ಳಸಾಗಣೆದಾರರು ವಿದೇಶದಲ್ಲಿ ಅಡಗಿಕೊಂಡರೂ ದೇಶದ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಭಾರತೀಯ ಕಾನೂನು ಸಂಸ್ಥೆಗಳು ಮತ್ತೊಮ್ಮೆ ಸಾಬೀತುಪಡಿಸಿರುವುದಾಗಿ ಹೇಳಿದರು.
"ಪ್ರಧಾನಿ ಮೋದಿ ಸರ್ಕಾರ ವಿದೇಶಗಳಲ್ಲಿ ಅಡಗಿರುವ ಮಾದಕವಸ್ತು ಕಳ್ಳಸಾಗಣೆದಾರರನ್ನು ನಿರಂತರವಾಗಿ ಪತ್ತೆಹಚ್ಚುತ್ತಿದೆ ಮತ್ತು ಅವರ ಜಾಲವನ್ನು ಕಾನೂನು ಮೂಲಕ ನಾಶಪಡಿಸುತ್ತಿದೆ. ಮಾದಕವಸ್ತುಗಳ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಮೂಲಕ, ಎನ್‌ಸಿಬಿ ಯುಎಇಯಿಂದ ಪರಾರಿಯಾಗಿರುವ ಮಾದಕವಸ್ತು ಕಿಂಗ್ ಪಿನ್ ವೀರೇಂದ್ರ ಸಿಂಗ್ ಬಸೋಯಾನನ್ನು ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿರುವುದಾಗಿ ಶಾ ತಿಳಿಸಿದ್ದಾರೆ.
Modi govt is relentlessly tracking down drug traffickers hiding abroad and destroying their entire ecosystem with a ruthless approach.
Creating a new milestone in the policy of zero tolerance against narcotics, the NCB secured the return of fugitive drug kingpin Virender Singh…
ಈ ವರ್ಷದ ಏಪ್ರಿಲ್ ಆರಂಭದಲ್ಲಿ, 'ಆಪರೇಷನ್ ಗ್ಲೋಬಲ್-ಹಂಟ್' ಅಡಿಯಲ್ಲಿ ಎನ್‌ಸಿಬಿ 59 ವರ್ಷದ ಜಾಗತಿಕ ಮಾದಕವಸ್ತು ಕಿಂಗ್ ಪಿನ್ ಮೊಹಮ್ಮದ್ ಸಲೀಂ ಡೋಲಾನನ್ನು ಟರ್ಕಿಯಿಂದ ಗಡೀಪಾರು ಮಾಡಿಸುವಲ್ಲಿ ಯಶಸ್ವಿಯಾಗಿತ್ತು. ದೇಶಭ್ರಷ್ಟ ಜಾಲಗಳೊಂದಿಗೆ ಸಂಪರ್ಕ ಹೊಂದಿದ ಅಂತರರಾಷ್ಟ್ರೀಯ ಮಾದಕವಸ್ತು ಸಿಂಡಿಕೇಟ್‌ಗಳನ್ನು ನಿರ್ಮೂಲನೆ ಮಾಡುವ ಪ್ರಯತ್ನಗಳಲ್ಲಿ ಈ ಕಾರ್ಯಾಚರಣೆಯನ್ನು ಪ್ರಮುಖ ಪ್ರಗತಿ ಎಂದು ಪರಿಗಣಿಸಲಾಗಿದೆ.

