ಸುಬ್ರಹ್ಮಣ್ಯ: ಕಡಬ ತಾಲೂಕಿನ ಪುತ್ತಿಗೆ ಗ್ರಾಮದ ಉದನೆ ಎಂಬಲ್ಲಿ ಗುಂಡ್ಯ ಹೊಳೆಗೆ ಜನರ ಬಹುಕಾಲದ ಬೇಡಿಕೆಯಂತೆ ಸೇತುವೆ ನಿರ್ಮಾಗೊಳ್ಳುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರಿಂದಾಗಿ ಶಿರಾಡಿ, ಗುಂಡ್ಯ, ಉದನೆ, ಶಿಬಾಜೆ, ಸಿರಿಬಾಗಿಲು ಭಾಗದ ಜನರು ತಾಲೂಕು ಕೇಂದ್ರ ಕಡಬ ಪಟ್ಟಣವನ್ನು ಅತೀ ಸುಲಭವಾಗಿ ಸಂಪರ್ಕಿಸಬಹುದು.
ಸೇತುವೆಯ ಮೇಲ್ಭಾಗಕ್ಕೆ ಕಾಂಕ್ರೀಟ್ ಹಾಕಲಾಗಿದ್ದು, ತಡೆ ಬೇಲಿ ಪೂರ್ಣ ಗೊಂಡಿದೆ. ಇನ್ನು ಎರಡು ಭಾಗದ ರಸ್ತೆ ಕಾಮಗಾರಿ ನಡೆದಲ್ಲಿ ಸೇತುವೆ ವಾಹನ ಸಂಚಾರಕ್ಕೆ ಮುಕ್ತವಾಗಲಿದೆ. ಆದರೆ ಉದನೆ ಯಿಂದ ತಾಲೂಕು ಕೇಂದ್ರ ಕಡಬವನ್ನು ಸಂಪರ್ಕಿಸುವ ಉದನೆ- ಕಲ್ಲುಗುಡ್ಡೆ ಮತ್ತು ಉದನೆಕೊಣಾಜೆ ರಸ್ತೆ ಮಾತ್ರ ತೀರಾ ಶೋಚನೀಯ ಸ್ಥಿತಿಯಲ್ಲಿದೆ.
ರಸ್ತೆ ದುರಸ್ತಿಗೊಂಡಿಲ್ಲ
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಪೇಟೆಯಿಂದ ಕಡಬವನ್ನು ಹತ್ತಿರದಿಂದ ಸಂಪರ್ಕಿಸಲು ಉದನೆ ಸೇತುವೆ ನಿರ್ಮಿಸಲಾಗುತ್ತಿದೆ.
ಬೆಂಗಳೂರು ಸಂಪರ್ಕಕ್ಕೆ ಹತ್ತಿರ ದಾರಿ
ಉದನೆಯಲ್ಲಿ ಸೇತುವೆ ಹಲವಾರು ಪ್ರಯೋಜನಗಳಿಗೆ ದಾರಿಯಾಗಲಿವೆ.
ಕಳಾರ-ಕನ್ವಾರೆ-ಕಲ್ಲುಗುಡ್ಡೆ- ಉದನೆ- ಶಿಬಾಜೆ ರಸ್ತೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಒಳಪಟ್ಟಿದ್ದು, ಈ ರಸ್ತೆ ಅಭಿವೃದ್ಧಿಗೆ ಅನುದಾನವೂ ಮಂಜೂರಾಗಿದೆ. ಶೀಘ್ರ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಉದನೆ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
-ಪಿ.ಪಿ.ವರ್ಗೀಸ್, ಜಿಲ್ಲಾ ಪಂಚಾಯತ್ ಸದಸ್ಯರು, ಕಡಬ

