ಉಡುಪಿ: ಚಲಿಸುತ್ತಿದ್ದ ಕಾರಿಗೆ ನಾಯಿ ಅಡ್ಡಬಂದ ಪರಿಣಾಮ ಇನ್ನೊಂದು ಕಾರು ಹಿಂದಿನಿಂದ ಬಂದು ಢಿಕ್ಕಿ ಹೊಡೆದ ಘಟನೆ ಪರ್ಕಳದಲ್ಲಿ ನಡೆದಿದೆ.
80 ಬಡಗಬೆಟ್ಟು ಗ್ರಾಮದ ನವೀನ ಶೆಟ್ಟಿ ಅವರು ಸಂಬಂಧಿಕರ ಮದುವೆ ಕಾರ್ಯಕ್ರಮದ ನಿಮಿತ್ತ ಕಾರಿನಲ್ಲಿ ಸಹೋದರ ಪ್ರಭಾಕರ ಶೆಟ್ಟಿ, ದಿನೇಶ್ ಶೆಟ್ಟಿ, ಅತ್ತಿಗೆ ಶಶಿಕಲಾ ಶೆಟ್ಟಿ, ಅಣ್ಣನ ಮಗಳು ಪ್ರಗತಿ ಶೆಟ್ಟಿ ಮತ್ತು ಮಕ್ಕಳಾದ ಸಾನ್ವಿ ಶೆಟ್ಟಿ ಮತ್ತು ಸನ್ವಿತ್ ಶೆಟ್ಟಿಯೊಂದಿಗೆ ರಾ.ಹೆ.
169 ಎಯಲ್ಲಿ ಪರ್ಕಳದಿಂದ ಹಿರಿಯಡಕ ಕಡೆಗೆ ಹೋಗುತ್ತಿದ್ದಾಗ ಪರ್ಕಳ ಶಾಲೆಯ ಎದುರು ನಾಯಿ ಅಡ್ಡ ಬಂದ ಕಾರಣ ಕಾರಿನ ವೇಗವನ್ನು ಕಡಿಮೆ ಮಾಡಿದ್ದರು. ಆಗ ಹಿಂಬದಿಯಿಂದ ಇನ್ನೊಂದು ಕಾರು ಚಾಲಕ ತನ್ನ ಕಾರನ್ನು ಅಜಾಗರೂಕತೆ ಹಾಗೂ ನಿರ್ಯಕ್ಷ್ಯತನದಿಂದ ಚಲಾಯಿಸಿ ನವೀನ್ ಶೆಟ್ಟಿಯವರ ಕಾರಿನ ಹಿಂಬಾಗಕ್ಕೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮವಾಗಿ ಕಾರಿನಲ್ಲಿದ್ದ ದಿನೇಶ್ ಶೆಟ್ಟಿಯವರ ತಲೆಯ ಹಿಂಬದಿಗೆ, ಶಶಿಕಲಾ ಶೆಟ್ಟಿ ಅವರ ದವಡೆಗೆ , ಸಾನ್ವಿ ಶೆಟ್ಟಿಯವರಿಗೆ ಎದೆಗೆ ಗುದ್ದಿದ ಗಾಯ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

