ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಎರಡು ಖಾಸಗಿ ಬಸ್‌ಗಳ ಚಾಲಕ ಮತ್ತು ನಿರ್ವಾಹಕರ ನಡುವೆ ಟೈಮಿಂಗ್ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ ಬಡನಿಡಿಯೂರಿನ ಕೆ.ವೈಭವ್ ಪೈ ಅವರು ಖಾಸಗಿ ಬಸ್ ಒಂದರ ಚಾಲಕರಾಗಿದ್ದು ಜು.4ರ ರಾತ್ರಿ 9.15ಕ್ಕೆ ಉಡುಪಿಯಿಂದ ಕೆಮ್ಮಣ್ಣು ಹೂಡೆಗೆ ಹೊರಡಲು ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದ್ದರು.
ಇದೇ ವೇಳೆ ಇನ್ನೊಂದು ಖಾಸಗಿ ಬಸ್ ಚಾಲಕ ತನ್ನ ಬಸ್ ಅನ್ನು ವೈಭವ್ ಅವರು ಚಾಲಕರಾಗಿರುವ ಬಸ್‌ನ ಎದುರು ತಂದು ನಿಲ್ಲಿಸಿದ್ದಾರೆ.
ಬಸ್ 8.53ಕ್ಕೆ ಉಡುಪಿಯಿಂದ ಕೆಮ್ಮಣ್ಣು ಹೂಡೆಗೆ ಹೊರಡಬೆಕಾಗಿದ್ದು 9ಗಂಟೆ ಆದರೂ ಹೊರಡದಿದ್ದಾಗ ಬಸ್ ನ ಕಂಡಕ್ಟರ್ ಯಾಕೆ ಬಸ್ ಹೊರಡಲಿಲ್ಲ ಎಂದು ಕೇಳಿದಾಗ ಬಸ್ ಹಾಳಾಗಿ ಸ್ಟಾರ್ಟ್ ಆಗದೆ ಇದ್ದು ಹೂಡೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ವೇಳೆ ಎರಡು ಬಸ್ ಚಾಲಕರು ಮತ್ತು ಕಂಡಕ್ಟರ್ ನಡುವೆ ವಾಗ್ವಾದ ಆರಂಭಗೊಂಡಿದೆ. ಇನ್ನೊಂದು ಬಸ್‌ನ ಚಾಲಕ ಸಲ್ಮಾನ್ ಉದ್ದೇಶಪೂರ್ವಕವಾಗಿ ವೈಭವ್ ಅವರು ಚಾಲನೆ ಮಾಡಿಕೊಂಡಿದ್ದ ಬಸ್ ಮುಂದಕ್ಕೆ ಹೋಗದಂತೆ ತಡೆದು ಬಸ್‌ನ ಎಡ ಬದಿಗೆ ಎರಡು ಬಾರಿ ಢಿಕ್ಕಿ ಹೊಡೆದು 1,50,000 ಲಕ್ಷ ಗಳಷ್ಟು ನಷ್ಟ ಉಂಟುಮಾಡಿದ್ದರು. ಜತೆಗೆ ಬಸ್‌ನ ಕಂಡಕ್ಟರ್ ರೋಷನ್, ಶಾರುಖ್, ಅಫ್ರೋಜ್, ನವಾಜ್ ಎಂಬುವವರು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ವೈಭವ್ ಪೈ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

