ಉಡುಪಿ: ಶೈಕ್ಷಣಿಕ ಹಬ್ ಎಂದೇ ಗುರುತಿಸಿಕೊಂಡಿರುವ ನಗರದಲ್ಲಿ ದಿನಕ್ಕೆ ಸಾವಿರಾರು ಜನರು ಉದ್ಯೋಗ, ಶಿಕ್ಷಣದ ವಿಚಾರವಾಗಿ ಓಡಾಡುತ್ತಿದ್ದು, ದಿನಾಲೂ ಜನಜಂಗುಳಿಯಿಂದ ತುಂಬಿರುತ್ತದೆ. ಈ ನಡುವೆ ನಗರದ ಸಿಗ್ನಲ್ ಸಹಿತ ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆಯೂ ಹೆಚ್ಚಿದೆ.
ಸಿಟಿ / ಸರ್ವಿಸ್ ಬಸ್ ನಿಲ್ದಾಣ, ಬನ್ನಂಜೆ ಸರಕಾರಿ ಬಸ್ ನಿಲ್ದಾಣ ಮಾತ್ರವ ಲ್ಲದೇ ಕಲ್ಸಂಕ ಜಂಕ್ಷನ್ ಸಿಗ್ನಲ್, ರಸ್ತೆ ಬದಿಗಳಲ್ಲಿ, ಶ್ರೀಕೃಷ್ಣ ಮಠಕ್ಕೆ ತೆರಳುವ ಪಾರ್ಕಿಂಗ್ ಸ್ಥಳದಲ್ಲಿ ಅಲ್ಲಲ್ಲಿ ಈ ಭಿಕ್ಷುಕರು ಕಾಣಿಸಿ ಕೊಂಡು ಜನರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯುಂಟು ಮಾಡುತ್ತಿದ್ದಾರೆ.
ಸಣ್ಣ ವಯಸ್ಸಿನ ಹೆಣ್ಣು ಮಕ್ಕಳು, ಕಂಕುಳಲ್ಲಿ ಮಕ್ಕಳನ್ನು ಹೊತ್ತುಕೊಂಡು ಭಿಕ್ಷಾಟನೆಗೆ ಇಳಿಯುತ್ತಿದ್ದಾರೆ. ಇವರ ಜತೆ ಅಪ್ರಾಪ್ತ ವಯಸ್ಸಿನ ಬಾಲಕ, ಬಾಲಕಿಯರು ಭಿಕ್ಷಾಟನೆ ಮಾಡುತ್ತಿರುವ ದೃಶ್ಯ ಕಂಡು ಬರುತ್ತಿದೆ. ರಾತ್ರಿ ವೇಳೆ ಇತರ ಯುವಕ, ಯುವತಿಯರ ಜತೆ ರಸ್ತೆ ಬದಿಯಲ್ಲೇ ಠಿಕಾಣಿ ಹೂಡಿ ಗಲಾಟೆ ಮಾಡುವ ಘಟನೆಗಳು ಕೂಡ ನಡೆಯುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಲು ಮುಂದಾದ ಕೂಡಲೇ ಈ ಭಿಕ್ಷುಕರು ಮಕ್ಕಳ ಸಹಿತ ಪರಾರಿಯಾಗುತ್ತಿದ್ದು, ಕೆಲವೊಮ್ಮೆ ಮಹಿಳೆ ಮತ್ತು ಮಕ್ಕಳ ರಕ್ಷಣಾ ಅಧಿಕಾರಿಗಳು, ಪೊಲೀಸ್ ಸಿಬಂದಿ ತಡವಾಗಿ ಬರುವ ಹಿನ್ನೆಲೆಯಲ್ಲಿ ಜನರು ದೂರು ನೀಡಲು ಹಿಂದೆ ಸರಿಯುತ್ತಾರೆ.
ಮಕ್ಕಳಿಂದಲೂ ಭಿಕ್ಷಾಟನೆ
ನಗರದಲ್ಲಿ ವಿವಿಧೆಡೆ ಅಪ್ರಾಪ್ತ ವಯಸ್ಸಿನ ಯುವಕ-ಯುವತಿ ಯರು, ಸಣ್ಣ ಮಕ್ಕಳು ಕೂಡ ವಿವಿಧ ವಸ್ತುಗಳ ಮಾರಾಟದ ಜತೆ ಭಿಕ್ಷಾಟನೆ ನಡೆಸುತ್ತಿದ್ದಾರೆ. ಉತ್ತರ ಭಾರತದಿಂದ ಬಂದಂತಹ ಕುಟುಂಬಗಳೇ ಇಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.
ಮಕ್ಕಳು ತಮ್ಮ ಪೋಷಕರು, ಕುಟುಂ ಬಸ್ಥರ ಜತೆ ಭಿಕ್ಷಾಟನೆ ನಡೆಸುತ್ತಿರುವ ವಿಚಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿದ್ದರೂ ಸುಮ¬¾ನಿರುವುದು ವಿಪರ್ಯಾಸ.
ಕಲ್ಸಂಕದಲ್ಲಿ ತೃತೀಯ ಲಿಂಗಿಗಳ ಕಾಟ
ಕಲ್ಸಂಕ ಸಿಗ್ನಲ್ ದಾಟಿಯೇ ಜನರು ಶ್ರೀಕೃಷ್ಣ ಮಠ, ಬಸ್ ನಿಲ್ದಾಣ ಹಾಗೂ ಇತರೆಡೆ ಸಾಗಬೇಕಾದ್ದರಿಂದ ಈ ಸಿಗ್ನಲ್‌ನಲ್ಲಿ ಹೆಚ್ಚಿನ ಪ್ರಮಾಣದ ವಾಹನ ಸಂಚಾರ ಇರುತ್ತದೆ. ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಮೂವರು ಪೊಲೀಸ್ ಅಧಿಕಾರಿ, ಸಿಬಂದಿಯನ್ನು ಕೂಡ ನಿಯೋಜಿಸಲಾಗುತ್ತದೆ. ಆದರೆ ಇಲ್ಲಿ ಸಿಗ್ನಲ್ ಬಿದ್ದ ಕೂಡಲೇ ತೃತೀಯ ಲಿಂಗಿಗಳ ಭಿಕ್ಷಾಟನೆ ಪ್ರಾರಂಭವಾಗುತ್ತಿದ್ದು, ಜನರ ಮೈ ಕೈ ಸವರಿಕೊಂಡು, ಕಾರು, ರಿಕ್ಷಾಗಳ ಒಳಗೆ ಏಕಾಏಕಿ ಕೈ ಹಾಕುವುದು, ಜೇಬಿಗೆ ಕೈ ಹಾಕುವ ಪ್ರವೃತ್ತಿ ತೋರುತ್ತಿದ್ದಾರೆ. ಜನರು ಇದರಿಂದ ಇರುಸುಮುರಿಸು ಗೊಳ್ಳುತ್ತಿದ್ದಾರೆ. ಕೆಲವರಂತೂ ಮುಜುಗರದಿಂದಲೇ ಹಣ ನೀಡುತ್ತಿದ್ದು, ಪೊಲೀಸರ ಎದುರಲ್ಲೇ ಸಿಗ್ನಲ್‌ನಲ್ಲಿ ಈ ರೀತಿ ನಡೆಯುತ್ತಿದ್ದರೂ ಪೊಲೀಸರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿರುವುದು ಜನ ಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗುತ್ತಿದೆ.

