Dailyhunt
Udupi: ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಬೈಕ್‌ ಢಿಕ್ಕಿ

Udupi: ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಬೈಕ್‌ ಢಿಕ್ಕಿ

ಸ್ತೆ ದಾಟಲು ನಿಂತಿದ್ದ ಮಹಿಳೆಗೆ ಬೈಕ್‌ ಢಿಕ್ಕಿಉಡುಪಿ: ಕಡಿಯಾಳಿ ಸಮೀಪ ರಸ್ತೆ ದಾಟಲು ನಿಂತಿದ್ದ ಕಡಿಯಾಳಿ ಕುಂಜಿಬೆಟ್ಟು ನಿವಾಸಿ ಪದ್ಮಾವತಿ ವಿ. ಜೋಯಿಸ ಅವರಿಗೆ ರಮಾನಂದ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಬೈಕ್‌ ಎ.2ರಂದು ಢಿಕ್ಕಿಯಾಗಿದೆ. ಈ ಪರಿಣಾಮ ಮಹಿಳೆ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ: ಸ್ಕೂಟರ್‌ ಗೆ ಗೂಡ್ಸ್ ವಾಹನ ಢಿಕ್ಕಿ
ಶಿರ್ವ:
ಇಲ್ಲಿನ ಮುಖ್ಯರಸ್ತೆಯ ಕುತ್ಯಾರು ಜಂಕ್ಷನ್ ಬಳಿ ಎ. 3 ರಂದು ಬೆಳಗ್ಗೆ ಶಿರ್ವ ಕಡೆಯಿಂದ ಸೈಂಟ್‌ ಮೇರಿಸ್‌ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ಬರುತ್ತಿದ್ದ ಗೂಡ್ಸ್‌ ವಾಹನ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಶಬ್ಬೀರ್‌ ಅಹಮ್ಮದ್‌ ಗಾಯಗೊಂಡಿದ್ದಾರೆ.

ಅವರನ್ನು ಸ್ಥಳೀಯರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani