ಉಡುಪಿ: ಶ್ರೀಕೃಷ್ಣಮಠದ ರಥಬೀದಿಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಬೃಂದಾವನ ಸಾನ್ನಿಧ್ಯದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ ಆಜ್ಞಾನುಸಾರ ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹಾಗೂ ಅಷ್ಟಮಠಾಧೀಶರ ಸಾನ್ನಿಧ್ಯದಲ್ಲಿ ಆ.
29ರಿಂದ 31ರ ವರೆಗೆ ಶ್ರೀ ರಾಘವೇಂದ್ರಗುರು ಸಾರ್ವಭೌಮರ 355ನೇ ಆರಾಧನಾ ಮಹೋತ್ಸವ, ಅನ್ನಸಂತರ್ಪಣೆ ನೆರವೇರಲಿದೆ.
ಈ ಸಂದರ್ಭದಲ್ಲಿ ಪಲ್ಲಕಿ ಉತ್ಸವ, ಹೂವಿನ ಪೂಜೆ, ತೊಟ್ಟಿಲ ಪೂಜೆ, ರಥೋತ್ಸವ ಮೊದಲಾದ ಸೇವೆ ಹಾಗೂ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.
ವಿಶೇಷ ಅಲಂಕಾರ ಸೇವೆ
ಈ ಬಾರಿ ಭಕ್ತರೋರ್ವರಿಂದ ರಾಯರ ಆರಾಧನೆಯ ಪ್ರಯುಕ್ತ ಮಠವು ವಿಶೇಷ ಅಲಂಕಾರದೊಂದಿಗೆ ಕಂಗೊಳಿಸಲಿದೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ

