Dailyhunt Logo
  • Light mode
    Follow system
    Dark mode
    • Play Story
    • App Story
ಊಟವಾದ ತಕ್ಷಣ ಹಣ್ಣು ತಿನ್ನುತ್ತಿದ್ದೀರಾ? ವೈದ್ಯರು ನೀಡುವ ಈ ಎಚ್ಚರಿಕೆಯ ಮಾಹಿತಿ ತಿಳಿಯಿರಿ..

ಊಟವಾದ ತಕ್ಷಣ ಹಣ್ಣು ತಿನ್ನುತ್ತಿದ್ದೀರಾ? ವೈದ್ಯರು ನೀಡುವ ಈ ಎಚ್ಚರಿಕೆಯ ಮಾಹಿತಿ ತಿಳಿಯಿರಿ..

ಣ್ಣುಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಪೌಷ್ಟಿಕ ಹಾಗೂ ಹಿತಕರವಾದ ಆಹಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ವಿಟಮಿನ್ (vitamins) , ಖನಿಜಾಂಶ (minerals), ಆಂಟಿ ಆಕ್ಸಿಡೆಂಟ್ (antioxidants) ಮತ್ತು ನಾರಿನಂಶಗಳಿಂದ (Fiber) ಸಮೃದ್ಧವಾಗಿರುವ ಹಣ್ಣುಗಳು ರೋಗನಿರೋಧಕ ಶಕ್ತಿ (immunity), ಜೀರ್ಣಕ್ರಿಯೆ (digestion) ಹಾಗೂ ಹೃದಯದ ಆರೋಗ್ಯವನ್ನು (heart health) ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಆದರೆ, ನಾವು ಯಾವ ಆಹಾರ ಸೇವಿಸುತ್ತೇವೆ ಎಂಬುದರ ಜೊತೆಗೆ ಅದನ್ನು ಯಾವ ಸಮಯದಲ್ಲಿ ಸೇವಿಸುತ್ತೇವೆ ಎಂಬುದು ಸಹ ಅಷ್ಟೇ ಮುಖ್ಯ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ.

ಎಸ್‌ಐಎಮ್‌ಎಸ್ ಆಸ್ಪತ್ರೆಯ (SIMS Hospital) ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಹಿರಿಯ ಸಲಹೆಗಾರ ಡಾ. ದಿನೇಶ್ ರಾಮಸ್ವಾಮಿ ಅವರ ಪ್ರಕಾರ, ʼಹೆಚ್ಚಿನ ಜನರು ದಿನದ ಯಾವುದೇ ಸಮಯದಲ್ಲಿ ಹಣ್ಣುಗಳನ್ನು ತಿಂದರೂ ಅವರಿಗೆ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ. ಆದರೆ, ಭೋಜನದ ತಕ್ಷಣವೇ ಹಣ್ಣುಗಳನ್ನು ತಿನ್ನುವುದು ಕೆಲವರಲ್ಲಿ ಜೀರ್ಣಕ್ರಿಯೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು,ʼ ಎನ್ನುತ್ತಾರೆ.

ಊಟವಾದ ತಕ್ಷಣ ಹಣ್ಣು ತಿಂದರೆ ತೊಂದರೆ ಏಕೆ?

ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬಿನಂಶದಿಂದ ಕೂಡಿದ ಊಟವನ್ನು ಜೀರ್ಣಿಸಿಕೊಳ್ಳಲು ನಮ್ಮ ಜಠರ ಈಗಾಗಲೇ ಕಠಿಣವಾಗಿ ಶ್ರಮಿಸುತ್ತಿರುತ್ತದೆ. ಇಂತಹ ಸಮಯದಲ್ಲಿ ಊಟ ಮುಗಿದ ತಕ್ಷಣ ಹಣ್ಣುಗಳನ್ನು ತಿಂದಾಗ ಹೊಟ್ಟೆಯಲ್ಲಿ ಆಹಾರದ ಪ್ರಮಾಣ ಹೆಚ್ಚಾಗುತ್ತದೆ. ಇದು ಹೊಟ್ಟೆ ಅತಿಯಾಗಿ ತುಂಬಿದ ಅನುಭವ ನೀಡುವುದಲ್ಲದೆ, ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.

ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ (Sensitive digestive system) ಹೊಂದಿರುವವರಲ್ಲಿ ಇದು ಹೊಟ್ಟೆ ಉಬ್ಬರ ಮತ್ತು ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ.

ಹಣ್ಣುಗಳ ಹುದುಗುವಿಕೆ ಮತ್ತು ಗ್ಯಾಸ್ ಸಮಸ್ಯೆ (Fermentation & Gas)

ಕೆಲ ಹಣ್ಣುಗಳಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಹುದುಗುವಿಕೆಗೆ ಒಳಗಾಗುವ ಕಾರ್ಬೋಹೈಡ್ರೇಟ್‌ಗಳು (Fermentable carbohydrates) ಇರುತ್ತವೆ. ಇವು ಜೀರ್ಣಕ್ರಿಯೆಯ ಸಮಯದಲ್ಲಿ ಗ್ಯಾಸ್ ಉತ್ಪತ್ತಿ ಮಾಡುತ್ತವೆ.

ಡಾ. ದಿನೇಶ್ ರಾಮಸ್ವಾಮಿ ಅವರ ಪ್ರಕಾರ, ಈ ಕೆಳಗಿನ ಆರೋಗ್ಯ ಸಮಸ್ಯೆ ಇರುವವರು ಊಟದ ತಕ್ಷಣ ಹಣ್ಣು ತಿಂದರೆ ಗ್ಯಾಸ್ ಮತ್ತು ಅಜೀರ್ಣದ ಸಮಸ್ಯೆ ತೀವ್ರಗೊಳ್ಳಬಹುದು:

ಐಬಿಎಸ್ (Irritable Bowel Syndrome - IBS)

ಅಜೀರ್ಣ ಮತ್ತು ಡಿಸ್ಪೆಪ್ಸಿಯಾ (Dyspepsia/Indigestion)

ದೀರ್ಘಕಾಲದ ಹೊಟ್ಟೆ ಉಬ್ಬರ (Chronic Bloating)

ಎಸ್‌ಐಬಿಒ (SIBO - ಕರುಳಿನಲ್ಲಿ ಬ್ಯಾಕ್ಟೀರಿಯಾಗಳ ಅತಿಯಾದ ಬೆಳವಣಿಗೆ)

ರಕ್ತದಲ್ಲಿನ ಸಕ್ಕರೆ ಮಟ್ಟದ (Blood Sugar) ಮೇಲೆ ಪರಿಣಾಮ

ಹಣ್ಣುಗಳಲ್ಲಿ ಫ್ರಕ್ಟೋಸ್ ಮತ್ತು ಗ್ಲೂಕೋಸ್ ನಂತಹ ನೈಸರ್ಗಿಕ ಕಾರ್ಬೋಹೈಡ್ರೇಟ್‌ಗಳು ಇರುತ್ತವೆ. ಈಗಾಗಲೇ ಕಾರ್ಬೋಹೈಡ್ರೇಟ್ ಭರಿತ ಊಟ ಮಾಡಿದ ತಕ್ಷಣವೇ ಹಣ್ಣುಗಳನ್ನು ತಿಂದರೆ, ರಕ್ತದಲ್ಲಿನ ಸಕ್ಕರೆ ಮಟ್ಟ ಒಮ್ಮೆಲೆ ತೀವ್ರವಾಗಿ ಏರಿಕೆಯಾಗುವ (Sugar spike) ಸಾಧ್ಯತೆ ಇರುತ್ತದೆ. ಇದು ವಿಶೇಷವಾಗಿ: ಪ್ರಿ-ಡಯಾಬಿಟಿಸ್ (Prediabetes) ಇರುವವರಿಗೆ, ಟೈಪ್-2 ಮಧುಮೇಹಿಗಳಿಗೆ, ಇನ್ಸುಲಿನ್ ಪ್ರತಿರೋಧತೆ ಅಥವಾ ಬೊಜ್ಜು ನಿರ್ವಹಣೆ ಮಾಡುತ್ತಿರುವವರಿಗೆ ಹಾನಿಕಾರಕವಾಗಬಹುದು.

ಹಣ್ಣುಗಳನ್ನು ತಿನ್ನಲು ಅತ್ಯುತ್ತಮ ಸಮಯ ಯಾವುದು?

ಜೀರ್ಣಕ್ರಿಯೆಯ ತೊಂದರೆ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ತಜ್ಞರು ಈ ಕೆಳಗಿನ ಸಮಯವನ್ನು ಶಿಫಾರಸು ಮಾಡುತ್ತಾರೆ:

  • ಊಟಕ್ಕೆ 30-60 ನಿಮಿಷಗಳ ಮೊದಲು ಹಣ್ಣುಗಳನ್ನು ಸೇವಿಸುವುದು.
  • ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟದ ನಡುವಿನ ಸಮಯದಲ್ಲಿ (Mid-morning snack).
  • ಸಂಜೆಯ ಲಘು ಉಪಾಹಾರದ ರೂಪದಲ್ಲಿ.
  • ಎರಡು ಊಟಗಳ ನಡುವಿನ ಮಧ್ಯಂತರ ಸಮಯದಲ್ಲಿ.

ಹೀಗೆ ಮಾಡುವುದರಿಂದ ಹಣ್ಣುಗಳಲ್ಲಿರುವ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತದೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ತಡೆಯುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ಸ್ಥಿರವಾಗಿರಲು ನೆರವಾಗುತ್ತದೆ.

ಗಮನಿಸಿ: ಈ ಲೇಖನ ಕೇವಲ ಸಾಮಾನ್ಯ ಮಾಹಿತಿ ಮತ್ತು ಜಾಗೃತಿಗಾಗಿ ಮಾತ್ರ. ಇದನ್ನು ವೈದ್ಯಕೀಯ ಸಲಹೆಯೆಂದು ಪರಿಗಣಿಸಬಾರದು. ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಆಹಾರದ ಬದಲಾವಣೆಗಳಿಗಾಗಿ ಯಾವಾಗಲೂ ಅರ್ಹ ವೈದ್ಯರ ಸಲಹೆ ಪಡೆಯಿರಿ.

Dailyhunt
Disclaimer: This content has not been generated, created or edited by Dailyhunt. Publisher: Udayavani