Dailyhunt Logo
  • Light mode
    Follow system
    Dark mode
    • Play Story
    • App Story
ಉತ್ತರಪ್ರದೇಶ: ತರಬೇತಿ ವಿಮಾನ ಭೂಸ್ಪರ್ಶ, ಪೈಲಟ್ ಸುರಕ್ಷಿತ

ಉತ್ತರಪ್ರದೇಶ: ತರಬೇತಿ ವಿಮಾನ ಭೂಸ್ಪರ್ಶ, ಪೈಲಟ್ ಸುರಕ್ಷಿತ

ವದೆಹಲಿ: ಉತ್ತರಪ್ರದೇಶದ ಕಾಸಗಂಜ್‌ನ ಜಮೀನೊಂದರಲ್ಲಿ ತರಬೇತಿ ವಿಮಾನವೊಂದು ಸೋಮವಾರ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ 28 ವರ್ಷದ ಮಹಿಳಾ ತರಬೇತಿ ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ನಾಗರಿಕ ವಿಮಾನಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ.

ಚೇತಕ್ ಏವಿಯೇಷನ್ ಸಂಸ್ಥೆಯ 'ಸೆಸ್ನಾ 152' ವಿಮಾನವು ತುರ್ತು ಭೂ ಸ್ಪರ್ಶ ಮಾಡಲು ಕಾರಣವೇನೆಂದು ತನಿಖೆ ನಡೆಯುತ್ತಿದೆ.

ಕಳೆದ 4 ದಿನಗಳಲ್ಲಿ ಉತ್ತರಪ್ರದೇಶದಲ್ಲಿ ತರಬೇತಿ ವಿಮಾನಕ್ಕೆ ಸಂಬಂಧಿಸಿದಂತೆ 2ನೇ ಘಟನೆ ಇದಾಗಿದ್ದು, ಜೂ.26ರಂದು ಕಾನ್ಪುರ ವಿಮಾನ ನಿಲ್ದಾಣದಲ್ಲಿ ಚಾಲನೆಯಲ್ಲಿದ್ದ ತರಬೇತಿ ವಿಮಾನದ ಪ್ರೊಪೆಲ್ಲರ್ ಬಡಿದು ತರಬೇತಿ ಪೈಲಟ್ ಒಬ್ಬರು ಗಾಯಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Udayavani