Dailyhunt Logo
  • Light mode
    Follow system
    Dark mode
    • Play Story
    • App Story
ವಾರಾಂತ್ಯದ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಬೆಂಗಳೂರು-ಮಡಗಾಂವ್‌ ನಡುವೆ ವಿಶೇಷ ರೈಲು

ವಾರಾಂತ್ಯದ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಬೆಂಗಳೂರು-ಮಡಗಾಂವ್‌ ನಡುವೆ ವಿಶೇಷ ರೈಲು

ಬೆಂಗಳೂರು: ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸುವ ಉದ್ದೇಶದಿಂದ ಬೆಂಗಳೂರು ಕಂಟೋನ್ಮೆಂಟ್‌-ಮಡಗಾಂವ್‌ ಜಂಕ್ಷನ್‌ ನಡುವೆ ವಿಶೇಷ ರೈಲು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ರೈಲು ಸಂಖ್ಯೆ 06597 ಬೆಂಗಳೂರು ಕಂಟೋನ್ಮೆಂಟ್‌-ಮಡಗಾಂವ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಅ.1ರಂದು (ಗುರುವಾರ) ರಾತ್ರಿ 11.50ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡಲಿದೆ.

ಮರುದಿನ ಸಂಜೆ 6.10ಕ್ಕೆ ಮಡಗಾಂವ್‌ ಜಂಕ್ಷನ್‌ ತಲುಪಲಿದೆ.

ರೈಲು ಸಂಖ್ಯೆ 06598 ಮಡಗಾಂವ್‌ ಜಂಕ್ಷನ್‌-ಬೆಂಗಳೂರು ಕಂಟೋನ್ಮೆಂಟ್‌ ಎಕ್ಸ್‌ಪ್ರೆಸ್‌ ವಿಶೇಷ ರೈಲು ಅ.4ರಂದು (ರವಿವಾರ) ಬೆಳಗ್ಗೆ 8.40ಕ್ಕೆ ಮಡಗಾಂವ್‌ನಿಂದ ಹೊರಡಲಿದ್ದು, ಅದೇ ದಿನ ರಾತ್ರಿ 11.55ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ ತಲುಪಲಿದೆ.

ಈ ನಿಲ್ದಾಣಗಳಲ್ಲಿ ನಿಲುಗಡೆ
ವಿಶೇಷ ರೈಲು ಸರ್‌ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ ಬೆಂಗಳೂರು, ಚಿಕ್ಕಬಾಣಾವರ, ಕುಣಿಗಲ್‌, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್‌, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಮೂಕಾಂಬಿಕಾ ರೋಡ್‌ ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕಾರ್ಣ ರಸ್ತೆ, ಅಂಕೋಲಾ, ಕಾರವಾರ ಹಾಗೂ ಕಾಣಕೋಣ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.

23 ಬೋಗಿಗಳ ರೈಲು
ವಿಶೇಷ ರೈಲಿನಲ್ಲಿ ಒಟ್ಟು 23 ಬೋಗಿಗಳು ಇರಲಿವೆ. ಒಂದು 2-ಟಯರ್‌ ಎಸಿ, ಮೂರು 3-ಟಯರ್‌ ಎಸಿ, 10 ಸ್ಲೀಪರ್‌, ಏಳು ಸಾಮಾನ್ಯ ಬೋಗಿಗಳು ಹಾಗೂ ಎರಡು ಎಸ್‌ಎಲ್‌ಆರ್‌/ಡಿ ಬೋಗಿಗಳು ಇರಲಿವೆ.

ಟಿಕೆಟ್‌ ಬುಕ್ಕಿಂಗ್‌
ರೈಲು ಸಂಖ್ಯೆ 06598ಕ್ಕೆ ಸೆ.30ರಿಂದ ಎಲ್ಲ ಪ್ರಯಾಣಿಕರ ಕಾಯ್ದಿರಿಸುವ ವ್ಯವಸ್ಥೆ (PRS) ಕೇಂದ್ರಗಳು, ಇಂಟರ್‌ನೆಟ್‌ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್‌ ಮೂಲಕ ಟಿಕೆಟ್‌ ಕಾಯ್ದಿರಿಸಬಹುದು.

Dailyhunt
Disclaimer: This content has not been generated, created or edited by Dailyhunt. Publisher: Udayavani