ಪಣಜಿ: ರಾಜ್ಯದಲ್ಲಿ ಶೇ.90ಕ್ಕಿಂತ ಹೆಚ್ಚು ಅಪರಾಧಗಳು ವಲಸಿಗರಿಂದಲೇ ನಡೆಯುತ್ತಿವೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಮಂಗಳವಾರ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕೆಲಸಕ್ಕಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸಿಗರು ಬರುತ್ತಾರೆ. ಅಲ್ಲದೆ ಇಲ್ಲಿ ದರೋಡೆ, ಅತ್ಯಾಚಾರ, ಡಕಾಯಿತಿಗಳಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಿದ್ದಾರೆ.
2023ರಲ್ಲೂ ಇದೇ ರೀತಿ ಹೇಳಿಕೆಯನ್ನು ಸಾವಂತ್ ನೀಡಿದ್ದರು.

