Dailyhunt
Video: ಕಳ್ಳತನ ಮಾಡಲು ಹೋದವನನ್ನು ಮನೆಯಲ್ಲೇ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು

Video: ಕಳ್ಳತನ ಮಾಡಲು ಹೋದವನನ್ನು ಮನೆಯಲ್ಲೇ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು

ಕ್ನೋ: ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನನ್ನು ಮನೆಯಲ್ಲಿದ್ದ ಮಹಿಳೆಯರೇ ಸೇರಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸದ್ಯ ಮಹಿಳೆಯರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ಮಾರ್ಚ್ 21 ರಂದು ಈದ್ ಹಬ್ಬದ ಸಂಭ್ರಮದ ನಡುವೆಯೇ ಈ ಘಟನೆ ನಡೆದಿದೆ. ವೈದ್ಯರೊಬ್ಬರ ನಿವಾಸಕ್ಕೆ ಕಳ್ಳನೊಬ್ಬ ಕಳ್ಳತನ ಮಾಡುವ ಉದ್ದೇಶದಿಂದ ಒಳನುಗ್ಗಿದ್ದಾನೆ. ಈ ವೇಳೆ ಮನೆಯವರೆಲ್ಲರೂ ಊಟದ ಮೇಜಿನ ಬಳಿ ಕುಳಿತು ಊಟ ಮಾಡುತ್ತಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಬಂದಿರುವುದನ್ನು ಗಮನಿಸಿದ ಮಹಿಳೆಯರು, ಕಿಂಚಿತ್ತೂ ಗಾಬರಿಯಾಗದೆ ತಕ್ಷಣವೇ ಎದ್ದು ಹೋಗಿ ಮೊದಲು ಮನೆಯ ಬಾಗಿಲುಗಳನ್ನು ಲಾಕ್ ಮಾಡಿದ್ದಾರೆ. ಇದಾದ ಬಳಿಕ ಕಳ್ಳ ಮನೆಯಿಂದ ಹೊರ ಹೋಗಲು ಯಾವುದೇ ದಾರಿ ಇಲ್ಲದ್ದನ್ನು ಗಮನಿಸಿದ ಮಹಿಳೆಯರು ಕಳ್ಳ ಅಡಗಿ ಕುಳಿತ ಸ್ಥಳಕ್ಕೆ ತೆರಳಿ ಆತನನ್ನು ಹಿಡಿದ್ದು ಮನಬಂದಂತೆ ಥಳಿಸಿದ್ದಾರೆ.

ಮಹಿಳೆಯರ ಅಬ್ಬರಕ್ಕೆ ಬೆದರಿದ ಕಳ್ಳ ಕೊನೆಗೆ ಕೈಮುಗಿದು ಕ್ಷಮೆ ಕೇಳಿದ್ದಾನೆ. ಇದಾದ ಬಳಿಕ ಮಹಿಳೆಯರು ಹಾಗೂ ಸ್ಥಳೀಯರು ಸೇರಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani