Dailyhunt Logo
  • Light mode
    Follow system
    Dark mode
    • Play Story
    • App Story
Video: ಕ್ಯಾಮೆರಾದಲ್ಲಿ ಸೆರೆಯಾಯ್ತು ಅತೀಕ್ ಅಹ್ಮದ್ ಪುತ್ರನ ಕಾರು ಅಪಘಾತದ ಭಯಾನಕ ದೃಶ್ಯ

Video: ಕ್ಯಾಮೆರಾದಲ್ಲಿ ಸೆರೆಯಾಯ್ತು ಅತೀಕ್ ಅಹ್ಮದ್ ಪುತ್ರನ ಕಾರು ಅಪಘಾತದ ಭಯಾನಕ ದೃಶ್ಯ

ಝಾನ್ಸಿ : ಕುಖ್ಯಾತ ಗ್ಯಾಂಗ್‌ಸ್ಟರ್‌, ರಾಜಕಾರಣಿ ಅತೀಕ್ ಅಹ್ಮದ್ ಕಿರಿಯ ಪುತ್ರ ಅಬಾನ್ ಅಹ್ಮದ್ ಮೃತಪಟ್ಟ ಭೀಕರ ರಸ್ತೆ ಅಪಘಾತದ ದೃಶ್ಯಗಳು ಕಾರೊಂದರ ಡ್ಯಾಶ್‌ಕ್ಯಾಮ್ ನಲ್ಲಿ ಸೆರೆಯಾಗಿವೆ.

ಆಗಸ್ಟ್ 6 ರಂದು ಉತ್ತರ ಪ್ರದೇಶದ ಝಾನ್ಸಿ-ಕಾನ್ಪುರ್ ರಾಷ್ಟ್ರೀಯ ಹೆದ್ದಾರಿಯ ಪೂಂಚ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಅಬಾನ್ ಅಹಮದ್ ಮತ್ತು ಅವರ ಗೆಳೆಯ ಸೋನು (25) ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಇತರ ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡ್ಯಾಶ್‌ಕ್ಯಾಮ್ ನಲ್ಲಿ ವಿಡಿಯೋ ಸೆರೆ:

ಅಬಾನ್ ಅಹ್ಮದ್ ಕಾರು ಅಪಘಾತದ ವೇಳೆ ಹಿಂದೆ ಬರುತ್ತಿದ್ದ ವಾಹನದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ದೃಶ್ಯಗಳ ಪ್ರಕಾರ, ಬಿಳಿ ಬಣ್ಣದ ಹ್ಯುಂಡೈ ಕ್ರೆಟಾ ಎಸ್‌ಯುವಿ ಕಾರು ಅತ್ಯಂತ ವೇಗವಾಗಿ ಚಲಿಸುತ್ತಿದ್ದ ವೇಳೆ ದಿಢೀರ್ ನಿಯಂತ್ರಣ ಕಳೆದುಕೊಂಡ ಕಾರು, ರಸ್ತೆಯ ಎಡಭಾಗಕ್ಕೆ ಚಲಿಸಿ ಕಾಂಕ್ರೀಟ್ ಡಿವೈಡರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಸ್‌ಯುವಿ ಕಾರು ಗಾಳಿಗೆ ಹಾರಿ, ಹಲವು ಬಾರಿ ತಿರುಗಿ ಮತ್ತೆ ರಸ್ತೆಗೆ ಬಿದ್ದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಝಾನ್ಸಿ ಜೈಲಿನಲ್ಲಿರುವ ತಮ್ಮ ಸಹೋದರ ಅಲಿ ಅಹಮದ್ ಅವರನ್ನು ಭೇಟಿಯಾಗಲು ಅಬಾನ್ ಅಹಮದ್ ಮತ್ತು ಅವರ ಸಹಚರರು ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಅಪಘಾತದ ಎರಡು ದಿನಗಳ ಬಳಿಕ ಭಾರಿ ಪೊಲೀಸ್ ಭದ್ರತೆಯ ನಡುವೆ ಅಬಾನ್‌ನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಜೈಲಿನಲ್ಲಿದ್ದ ಆತನ ಸಹೋದರರಾದ ಉಮರ್ ಮತ್ತು ಅಲಿ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಸಂಜೆ ಸುಮಾರು 6 ಗಂಟೆಗೆ ಅಂತ್ಯಕ್ರಿಯೆ ಸ್ಥಳಕ್ಕೆ ಕರೆತರಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Udayavani